

ಉಡುಪಿ: ತನ್ನ ಮಡದಿಗೆ ಜೀವನಾಂಶ ನೀಡದೆ ತಪ್ಪಿಸಿಕೊಳ್ಳುತ್ತಾ ಸತಾಯಿಸುತ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿಗೆ ತನ್ನ ಪಿಂಚಣಿ ಹಣದಲ್ಲೇ ಜೀವನಾಂಶ ನೀಡಲು ನ್ಯಾಯಾಲಯ ಆದೇಶಿಸಿರುವ ಅಪರೂಪದ ಘಟನೆ ಉಡುಪಿಯಲ್ಲಿ ನಡೆದಿದೆ.
ನಿವೃತ್ತ ರೈಲ್ವೇ ಪೊಲೀಸ್ ಅಧಿಕಾರಿ ಜಯ ಭಂಡಾರಿ ತನ್ನ ಹೆಂಡತಿಗೆ ಹಿಂಸೆ ನೀಡಿ ಅವರನ್ನು ಮನೆಯಿಂದ ಹೊರಗೆ ಹಾಕಿದ್ದರು. ಈ ಬಗ್ಗೆ ಪತ್ನಿ ರಮಣಿ ಭಂಡಾರಿ ಕೇಸ್ ದಾಖಲಿಸಿದ್ದು ನ್ಯಾಯಾಲಯವು ಅರ್ಜಿಯೊಂದಿಗಿದ್ದ ಮಧ್ಯಂತರ ಜೀವನಾಂಶ ಅರ್ಜಿಯನ್ನು ಪುರಸ್ಕರಿಸಿದೆ.
ತಿಂಗಳಿಗೆ ಎಂಟು ಸಾವಿರ ರೂ. ಜೀವನಾಂಶ ನೀಡಬೇಕೆಂದು ಕೋರ್ಟ್ ಆದೇಶಿಸಿದೆ. ಅರ್ಜಿದಾರರ ಪರ ನ್ಯಾಯವಾದಿ ಗುರುರಾಜ್ ಜಿ.ಎಸ್ ಮಟ್ಟು ವಾದ ಮಂಡನೆ ಮಾಡಿದ್ದಾರೆ.