

ಉಡುಪಿ: ಕೊರಂಗ್ರಪಾಡಿಯ ಸೈಂಟ್ ಮೆರೀಸ್ ಆಟೋ ವರ್ಕ್ಸ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಟಪಾಡಿ ನಿವಾಸಿ ಸುಧಾಕರ ಮೃತ ದುರ್ದೈವಿಯಾಗಿದ್ದಾರೆ.
ಇಂದು ಬೆಳಿಗ್ಗೆ ಇವರು ಕೆಲಸಕ್ಕೆ ಹೋಗಿದ್ದರು. ಇವರು ದಿಢೀರ್ ಅನಾರೋಗ್ಯಕ್ಕೀಡಾಗಿದ್ದು ಮಗನಿಗೆ ಅಲ್ಲಿನ ಸಿಬ್ಬಂದಿ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಇವರನ್ನು ದಾಖಲಿಸಲಾಗಿದೆ.
ಇವರಿಗೆ ಸುಮಾರು ಹದಿನಾಲ್ಕು ವರ್ಷದಿಂದ ಬ್ರೈನ್ ಸ್ಟ್ರೋಕ್ ಆಗಿದ್ದು ಇತರ ಖಾಯಿಲೆಗಳಿಗೂ ಇವರು ಔಷಧಿ ತೆಗೆದುಕೊಳ್ಳುತ್ತಿದ್ದರು. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.