June 8, 2025
WhatsApp Image 2025-05-17 at 3.20.46 PM

ಶಿರ್ವ: ಬುರ್ಖಾಧಾರಿಸಿ ಕೊಂಡು ಮನೆಯೊಳಗೆ ಬಂದ ಇಬ್ಬರು ಕೋಣೆಯಲ್ಲಿ ಮಲಗಿದ್ದ ಮಗುವನ್ನು ಎತ್ತಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬೆಳಪು ಗ್ರಾಮದ ಜನತಾ ಕಾಲೋನಿ ಎಂಬಲ್ಲಿ ಶುಕ್ರವಾರ ನಡೆದಿದೆ.

ಮೊಹಮ್ಮದಾಲಿ ಎಂಬವರ ಮನೆಗೆ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ಬಂದು ನಮಗೆ ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿದ್ದು, ಅದರಲ್ಲಿ ಇನ್ನೊಬ್ಬಳು ಮಹಿಳೆ ಮನೆಯ ಒಳಗೆ ಹೋಗಿ ತೊಟ್ಟಿಲಲ್ಲಿ ಮಲಗಿದ್ದ ಮುಹಮ್ಮದಾಲಿಯ ತಮ್ಮನ ಮಗುವನ್ನು ಎತ್ತಿಕೊಂಡು ಓಡಿ ಹೋಗಲು ಪ್ರಯಸಿದರೆನ್ನಲಾಗಿದೆ.ಆಗ ಮನೆಯಲ್ಲಿದ್ದ ತಾಬೂರಿಸ್ ತಡೆದಾಗ ಆಕೆಯನ್ನು ದೂಡಿ, ಮಗುವನ್ನು ನೆಲದಲ್ಲಿ ಬಿಟ್ಟು ಇಬ್ಬರು ಪರಾರಿಯಾದರೆಂದು ದೂರಲಾಗಿದೆ.

ಇದರಿಂದ ತಾಬೂರಿಸ್ಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಗುವಿನ ತಾಯಿ ಸೀಮಾ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ

About The Author

Leave a Reply

Your email address will not be published. Required fields are marked *

<p>You cannot copy content of this page.</p>