March 18, 2026
WhatsApp Image 2024-12-16 at 5.59.57 PM

ಭಟ್ಕಳ: ಚಲಿಸುತ್ತಿದ್ದ ಶಾಲಾ ಟೆಂಪೋಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋಗಿದ್ದು ಟೆಂಪೋದಲ್ಲಿದ್ದ 12 ವಿದ್ಯಾರ್ಥಿಗಳನ್ನು ಚಾಲಕ ರಕ್ಷಿಸಿರುವ ಘಟನೆ ವೆಂಕಟಪುರದ ಬಳಿ ನಡೆದಿದೆ.

ಶಮ್ಸ್ ಶಾಲೆಯ ವಾಹನದಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ಬಿಡಲು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಶಮ್ಸ್ ಶಾಲೆಯಿಂದ ಶಿರಾಲಿ ಕಡೆಗೆ ವಿದ್ಯಾರ್ಥಿಗಳನ್ನು ಬಿಡಲು ತೆರಳುತ್ತಿದ್ದ ವೇಳೆ ಇಲ್ಲಿನ ವೆಂಕಟಾಪುರ ರಾಷ್ಟ್ರೀಯ ಹೆದ್ದಾರಿ ಬಳಿ ವಾಹನದಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಮೊದಲು ವಿದ್ಯಾರ್ಥಿಗಳನ್ನು ಕೆಳಗೆ ಇಳಿಸಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಅಷ್ಟರಲ್ಲಾಗಲೇ ವಾಹನಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಸ್ಥಳಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ವಾಹನ ಚಾಲಕ ನೀಡಿರುವ ಮಾಹಿತಿ ಪ್ರಕಾರ 12 ವಿದ್ಯಾರ್ಥಿಗಳು ವಾಹನದಲ್ಲಿದ್ದರು ಎಂದು ತಿಳಿದು ಬಂದಿದೆ. ಗ್ರಾಮೀಣ ಠಾಣೆ ಪಿ.ಐ ಚಂದನ ಗೋಪಾಲ,ಪಿ.ಎಸ್.ಐ ಭರಮಪ್ಪ ಬೆಳಗಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.