March 18, 2026
WhatsApp Image 2024-12-16 at 12.31.26 PM

ಉಡುಪಿ: ಬಡಗಬೆಟ್ಟು ನಿವಾಸಿ, ಗಾಜಿನ ಉದ್ಯಮ ನಡೆಸುತ್ತಿದ್ದ ಭಾಸ್ಕರ (65) ಅವರು ಕಾಣೆಯಾದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ವ್ಯಾಪಾರದಲ್ಲಿ ಆರ್ಥಿಕ ನಷ್ಟದ ಕಾರಣದಿಂದ ಮಾನಸಿಕವಾಗಿ ನೊಂದುಕೊಂಡು ಈ ಹಿಂದೆ ಹಲವು ಬಾರಿ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದರು. ತದನಂತರದಲ್ಲಿ ಅವರೇ ವರ್ಷ ಬಿಟ್ಟು ವಾಪಸ್‌ ಬರುತ್ತಿದ್ದರು. ಅದರಂತೆ 2023ರ ಜನವರಿ ತಿಂಗಳಿನಲ್ಲಿ ಮನೆಯನ್ನು ಬಿಟ್ಟು ಹೋದವರು ಈವರೆಗೂ ವಾಪಸು ಮನೆಗೆ ಬಾರದೇ ಇದ್ದು, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ ಎಂದು ಅವರ ಪುತ್ರ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.