
ಉಡುಪಿ: ‘ಸುನಂದಾ ವೆಲ್ನೆಸ್ ಸೆಂಟರ್ನಲ್ಲಿ ಕೌನ್ಸ್ಲಿಂಗ್ಗೆ ಬಂದಿದ್ದ ಮಹಿಳೆಯ ದೇಹ ಸ್ಪರ್ಶ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ಕಾಪು ತಾಲೂಕಿನ ಮೂಳೂರು ಗ್ರಾಮದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ನಿರಂಜನ ಶೇಖರ ಶೆಟ್ಟಿ (52) ಎಂದು ಗುರುತಿಸಲಾಗಿದೆ.
ದಾಂಪತ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆ ಕೌನ್ಸಿಲಿಂಗ್ಗಾಗಿ ಕಂಕಣಗುತ್ತು ಕಂಪೌಂಡ್ನಲ್ಲಿರುವ ವೆಸ್ ಸೆಂಟರ್ಗೆ ಭೇಟಿ ನೀಡಿದ್ದರು. ಈ ವೇಳೆ ಕೌನ್ಸ್ಲಿಂಗ್ ಮಾಡುತ್ತಿದ್ದ ನಿರಂಜನ ಶೇಖರ ಶೆಟ್ಟಿ ದೈಹಿಕ ಸ್ಪರ್ಶ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರು ದಾಖಲಾಗಿದೆ.
ಘಟನೆ ಬಳಿಕ ಮಹಿಳೆ ಕಾಪು ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ, ಅಪರಾಧ ಸಂಖ್ಯೆ 151/2025, ಕಲಂ74, 75(1), 75(2), 79 BNS ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಪೊಲೀಸರು ಆರೋಪಿ ನಿರಂಜನ ಶೇಖರ ಶೆಟ್ಟಿಯನ್ನು ದಸ್ತೆಗಿರಿ ಮಾಡಿದ್ದು, ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
