ಮಂಗಳೂರು: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ಅಟ್ಟೆಪದವು ಎಂಬಲ್ಲಿ ರೈತರಿಗೆ ಸಂತೆ ಮಾರುಕಟ್ಟೆಗೆ ಮೀಸಲಿಟ್ಟ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಲು ಮುಂದಾದ ಕಾಂಗ್ರೆಸ್

ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ಅಟ್ಟೆಪದವು ಎಂಬಲ್ಲಿ ಸರಕಾರಿ ಜಾಗ ಸರ್ವೇ ನಂಬ್ರ 35 ರಲ್ಲಿ ಗ್ರಾಮ ಪಂಚಾಯತ್ ರೈತರಿಗೆ ಸಂತೆ ಮಾರುಕಟ್ಟೆಗೆ ಮೀಸಲಿಟ್ಟ ಜಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಕ್ರಮವಾಗಿ ಮನೆ ಕಟ್ಟುತ್ತಿರುವುದನ್ನು ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ. ಹಾಗೂ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ನಿಲ್ಲಿಸಿದರು.

 

ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ .ಉಪಾಧ್ಯಕ್ಷೆ ಸುಷ್ಮಾ , ಹಾಗೂ ಸದಸ್ಯರುಗಳಾದ ಪುಷ್ಪಾ ನಾಯ್ಕ್ , ಶಶಿಕಲಾ ,ಸತೀಶ್ ಬಳ್ಳಾಜೆ , ಜಗದೀಶ್ ದುರ್ಗಾಕೋಡಿ , ತಾರನಾಥ್ ಕುಲಾಲ್ ಇವರು ಅಕ್ರಮವಾಗಿ ಕಟ್ಟುತ್ತಿದ್ದ ಕಟ್ಟಡವನ್ನು ಅಧಿಕಾರಿಗಳು ಬರುವತನಕ ಕಟ್ಟಬರದಾಗಿ ಹೇಳಿ ಪಂಚಾಂಗದ ಮೇಲೆ ನಿಂತಾಗ ಕಾಂಗ್ರೆಸ್ ನ ಕಾರ್ಯಕರ್ತರು ಕಟ್ಟಲು ಬಿಡದಿದ್ದರೆ ನಿಮ್ಮ ಕಾಲಿನ ಮೇಲೆ ಕಲ್ಲು ಇಟ್ಟು ಕಟ್ಟುತ್ತೇವೆ ಎಂದು ಬೆದರಿಕೆ ಒಡ್ಡಿದರು . ಇದರಿಂದ ಕೋಪಗೊಂಡ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸದಸ್ಯರ ರಕ್ಷಣೆಗೆ ಮುಂದಾದರು , ಈ ವೇಳೆ ಎರಡು ಕಡೆಗಳಿಂದ ಮಾತಿನ ಚಕಮಕಿ ನಡೆದು ಎರಡು ಗುಂಪುಗಳ ಮದ್ಯೆ ನೂಕಾಟ ನಡೆಯಿತು . ಈ ವೇಳೆ ಬಜ್ಪೆ ಠಾಣಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಗುಂಪು ಘರ್ಷಣೆಯನ್ನು ನಿಲ್ಲಿಸಿದರು .ಈ ವೇಳೆ ಕಂದಾಯ ನಿರೀಕ್ಷಕರಾದ ಪೂರ್ಣ ಚಂದ್ರ ರವರು ಎರಡು ಗುಂಪುಗಳ ಮದ್ಯೆ ಮಾತುಕತೆ ನಡೆಸಿ ಸಮಾಧಾನ ಪಡಿಸಿದರು . ಸದ್ರಿ ಜಾಗದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು . ಅಲ್ಲಿಯವರೆಗೆ ಸದ್ರಿ ಜಾಗದಲ್ಲಿ ಯಾವುದೇ ಕಾಮಗಾರಿ ನಡೆಸಬಾರದೆಂದು ಸೂಚಿಸಿ ಕಾಮಗಾರಿ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು . ಈ ವೇಳೆ ಪತ್ರಿಕಾ ಮಾಧ್ಯಮದಲ್ಲಿ ಮಾತನಾಡಿದ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು ಸರ್ವೇ ನಂಬ್ರ 35 ರಲ್ಲಿ ರೈತರ ಬೇಡಿಕೆಯಂತೆ ಸಂತೆ ಮಾರುಕಟ್ಟೆಗೆ ಈ ಜಾಗವನ್ನು ಮೀಸಲಿಡಲು ಪಂಚಾಯತ್ ನಿರ್ಣಯಿಸಲಾಗಿದೆ . ಆದರೂ ಈ ರೀತಿ ರೈತರಿಗೆ ಮೀಸಲಿಟ್ಟ ಜಾಗವನ್ನು ಅತಿಕ್ರಮಣ ಮಾಡುವುದು ಖಂಡನೀಯ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಹೇಳಿದರು . ಮುತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಲವೂರು ಹಾಗೂ ಮುತ್ತೂರು ಗ್ರಾಮದಲ್ಲಿ 20 ವರ್ಷಗಳಿಂದ ಬಡವರಿಗೆ ಕೊಡಲು ಬಾಕಿ ಇದ್ದ ಹಕ್ಕು ಪತ್ರವನ್ನು ನಮ್ಮ ಬಿಜೆಪಿ ಆಡಳಿತ ಅವಧಿಯಲ್ಲಿ 118 ಮಂದಿಗೆ ಇತ್ತೀಚೆಗೆ ನೀಡಿದ್ದೇವೆ. ಇನ್ನು ಹಲವಾರು ಅರ್ಜಿಗಳು ಬಾಕಿ ಇದ್ದು ಇವರಿಗೆ ನಿವೇಶನ ನೀಡಲು ಕಂದಾಯ ಇಲಾಖೆಗೆ ಸರಕಾರಿ ಜಾಗ ಗುರುತಿಸಿ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು .

Check Also

ಉಡುಪಿ: ಮಗನಿಂದ ಕಿರುಕುಳ – ತಾಯಿ ಸಖಿ ಸೆಂಟರ್‌ಗೆ ದಾಖಲು

ಉಡುಪಿ: ಮಾನಸಿಕ ಅಸ್ವಸ್ಥ ಮಗನ ಹಲ್ಲೆಗೆ ಹೆದರಿ ಜಿಲ್ಲಾಸ್ಪತ್ರೆಯಲ್ಲಿ ದುಃಖಿಸುತ್ತಿದ್ದ ಅಸಹಾಯಕ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು …

Leave a Reply

Your email address will not be published. Required fields are marked *

You cannot copy content of this page.