
ಉಡುಪಿ : ಶಂಕರಪುರ ಪೇಟೆಯ ಸಮೀಪದ ಮನೆಯೊಂದರ ಅಂಗಳಕ್ಕೆ ಚಿರತೆ ನುಗ್ಗಿ ಮನೆಯಂಗಳದಲ್ಲಿದ್ದ ನಾಲ್ಕು ವರ್ಷದ ಪರ್ಶಿಯನ್ ಬೆಕ್ಕನ್ನು ಹೊತ್ತೂಯ್ದ ಘಟನೆ ನಡೆದಿದೆ.
ಶಂಕರಪುರ ಪೇಟೆಯ ಸಮೀಪದಲ್ಲಿರುವ ಹಿತ್ಲುಹೌಸ್ನ ಮಾರ್ಗರೆಟ್ ಜುಡಿತ್ ಡಿ’ಸೋಜಾ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಬೆಕ್ಕು ಕಾಣೆಯಾಗಿರುವುದ್ದನ್ನು ಗಮನಿಸಿದ ಮನೆಯವರು ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ನಂತರ ಸಿಸಿ ಕೆಮರಾ ಫುಟೇಜ್ ಅನ್ನು ಪರಿಶೀಲನೆ ನಡೆಸಿದಾಗ ಡಿ. 12ರ ರಾತ್ರಿ 1.25 ಗಂಟೆ ಹೊತ್ತಿಗೆ ಚಿರತೆ ಮನೆಯಂಗಳಕ್ಕೆ ಬಂದಿದ್ದು, ಬೆಕ್ಕನ್ನು ಹಿಡಿದು ತಿಂದು ಕಾಲ್ಕಿತ್ತಿರುವುದು ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಧಿಸಿದಂತೆ ಪಂಜಿಮಾರು ಪ್ರದೇಶದಲ್ಲಿ ಈಗಾಗಲೇ ಚಿರತೆಯನ್ನು ಹಿಡಿಯಲು ಬೋನು ಇರಿಸಲಾಗಿದೆ ಎಂದು ಅರಣ್ಯ ಇಲಾಖೆಯ ಮಂಜುನಾಥ್ ನಾಯ್ಕ ತಿಳಿಸಿದ್ದಾರೆ.
