March 18, 2026
WhatsApp Image 2024-12-14 at 5.25.00 PM

ಉಡುಪಿ: ನೌಕಪಡೆಯ ಮುಂಬಯಿ ಮುಖ್ಯ ಕಚೇರಿಯ ಪಶ್ಚಿಮ ಕಮಾಂಡ್‌ನ‌ ವೈದ್ಯಕೀಯ ಮುಖ್ಯಸ್ಥರಾಗಿ ಉಡುಪಿ ಮೂಲದ ಡಾ| ಕೃಷ್ಣಮೂರ್ತಿ ನೇಮಕಗೊಂಡಿದ್ದಾರೆ. ಕಳೆದ 33 ವರ್ಷದಿಂದ ನೌಕಪಡೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪೀಡಿಯಾಟ್ರಿಕ್ಸ್‌ ವಿಭಾಗದ ಮುಖ್ಯಸ್ಥರಾಗಿ ಐಎನ್‌-ಅಸ್ವಿನಿ ಮತ್ತು ಎಎಫ್ಎಂಸಿ (ಆರ್ಮ್ ಫೋರ್ಸ್‌ ಮೆಡಿಕಲ್‌ ಕಾಲೇಜ್‌) ಹಾಗೂ ಐಎನ್‌ಎಚ್‌ಎಸ್‌ ಧನ್ವಂತರಿ ಹಾಗೂ ಐಎನ್‌ಎಚ್‌ಎಸ್‌ ಪತಂಜಲಿ ಆಸ್ಪತ್ರೆಯಲ್ಲೂ ಉನ್ನತ ಹುದ್ದೆ ಅಲಂಕರಿಸಿದ್ದರು. ಸಿಎಂಒ ಆಗಿ ಅಧಿಕಾರ ಸ್ವೀಕರಿಸುವ ಮೊದಲು ಭಾರತೀಯ ಸೇನೆಯಲ್ಲಿ ಸೆಕೆಂಡ್‌ಮೆಂಟ್‌ನಲ್ಲಿ ಎಡಿಜಿಎಂಎಸ್‌ ಆಗಿದ್ದರು. ಅವರು ಮೈಸೂರು ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದು, ಪುಣೆಯ ಎಎಫ್ಎಂಸಿಯಲ್ಲಿ ಪಿಡಿಯಾಟ್ರಿಕ್ಸ್‌ನಲ್ಲಿ ಎಂಡಿ ಪದವಿ ಪಡೆದಿದ್ದಾರೆ. ಇವರು ನ್ಯೂರಾಲಜಿ ತಜ್ಞರಾಗಿದ್ದು, ವೈದ್ಯಕೀಯ ಶಿಕ್ಷಣದ ಇಂಟರ್‌ನ್ಯಾಷನಲ್‌ ಫೈಮೆರ್‌ ಫೆಲೊಶಿಪ್‌ ಪಡೆದಿದ್ದಾರೆ. ಉಡುಪಿ ಜಿಲ್ಲೆಯ ಬಾರಕೂರು ಗ್ರಾಮದ ಕುರಾಡಿಯ ಮಹಾಬಲೇಶ್ವರ ಅಧಿಕಾರಿ ಮತ್ತು ಸುಮಿತ್ರಾ ದಂಪತಿ ಪುತ್ರರಾಗಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.