March 19, 2026
WhatsApp Image 2025-09-09 at 9.27.36 AM

ಉಡುಪಿ : ಕಲ್ಯಾಣಪುರ ಕಳವಿನಬಾಗಿಲು ಶ್ರೀಮಹಾವಿಠೋಬ ರುಖುಮಾಯಿ ಭಜನಾ ಮಂದಿರ ಬಳಿ, ಹರಿಯುವ ಸ್ವರ್ಣನದಿಯ ದಡದಲ್ಲಿ ವೃದ್ಧರೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ.

ನದಿಯ ದಡದಲ್ಲಿ ಕೈಚೀಲ ಲಭಿಸಿದ್ದು, ಅದರಲ್ಲಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕ ಪತ್ತೆಯಾಗಿದೆ. ಆ ಕಾರ್ಡ್‌ನಲ್ಲಿ ಕೇರಳ ಕೊಲ್ಲಂ ಜಿಲ್ಲೆಯ ಶಿವದಾಸನ್ ವಿ.(84) ಎಂದು ಬರೆದಿದೆ.

ಸೆ.11ರಂದು ನಸುಕಿನ ಜಾವ 5 ಗಂಟೆಯಿಂದ ಬೆಳಗ್ಗೆ 8 ಗಂಟೆಯ ನಡುವಿನ ಸಮಯದಲ್ಲಿ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿ ಅಥವಾ ಇನ್ಯಾವುದೊ ಕಾರಣದಿಂದ ಸಾವು ಸಂಭವಿಸರಬಹುದೆಂದು ಎಂದು ಶಂಕಿಸಲಾಗಿದೆ.

ಮಲ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಆನಂದ್,ಹೆಡ್ ಕಾನ್ಸಟೇಬಲ್ ಆದರ್ಶ್, ಮಹಿಳಾ ಪಿ, ಸಿ ಶಾಂಭವಿ ಕಾನೂನು ಪ್ರಕ್ರಿಯೆ ನಡೆಸಿದರು. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲು ಸಮಾಜಸೇವಕ ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ಇಲಾಖೆಗೆ ನೆರವಾದರು.

About The Author

Leave a Reply

Your email address will not be published. Required fields are marked *

You cannot copy content of this page.