March 16, 2026
WhatsApp Image 2024-01-10 at 9.58.31 AM
ಉಡುಪಿ: ಆತ್ರಾಡಿ ಪರೀಕ ನಿವಾಸಿ, ಹೊಟೇಲ್ ಮ್ಯಾನೇಜರ್ ಓರ್ವರು ಹೃದಯಾಘಾತದಿಂದ ನಿಧನರಾದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮಂಗಳೂರಿನ ಹೆಸರಾಂತ ಹೊಟೇಲ್ ಒಂದರ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ ಶೆಟ್ಟಿ(28) ಅವರಿಗೆ ಸೋಮವಾರ ರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ  ಮಹೇಶ್ ಶೆಟ್ಟಿ ಮೃತಪಟ್ಟರು.
ಮಹೇಶ್ ಶೆಟ್ಟಿ ಆತ್ರಾಡಿಯಲ್ಲಿ ಡ್ಯಾನ್ಸ್ ಕ್ರಿವ್ ಎಂಬ ನೃತ್ಯ ತರಬೇತಿ ಸಂಸ್ಥೆ ನಡೆಸುತ್ತಿದ್ದರು. ಇತ್ತೀಚೆಗೆ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿದ್ದ ಮಹೇಶ ಶೆಟ್ಟಿ ಉಡುಪಿ, ಮಂಗಳೂರಿನ ಹೊಟೇಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ನಿನ್ನೆಯಷ್ಟೇ ಡ್ಯಾನ್ ಕ್ಲಾಸ್‌ಅನ್ನು ಮತ್ತೆ ಮುನ್ನಡೆಸುವ ಬಗ್ಗೆ ಮಹೇಶ ಶೆಟ್ಟಿ ವಾಟ್ಸ್‌ಅಪ್ ಸ್ಟೇಟಸ್ ಹಾಕಿದ್ದರು ಎನ್ನಲಾಗಿದೆ.
ಪರೀಕ ಮಹಾಲಿಂಗೇಶ್ವರ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ್ ಶೆಟ್ಟಿ ಅವರು ಆತ್ರಾಡಿ lಹಾಗೂ ಪರ್ಕಳ ಪರಿಸರದಲ್ಲಿ ನೃತ್ಯ ತರಬೇತಿ ನೀಡಿ ಹಲವಾರು ಗ್ರಾಮೀಣ ಮಕ್ಕಳನ್ನು ರಂಗಕ್ಕೆ ಪರಿಚಯ ಮಾಡಿರುತ್ತಾರೆ. ಮೃತ ಮಹೇಶ್ ಶೆಟ್ಟಿ ತಂದೆ, ತಾಯಿ, ಓರ್ವ ಸಹೋದರ ಹಾಗೂ ಅಪಾರ ಸ್ನೇಹಿತರನ್ನು  ಅಗಲಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.