
ಉಡುಪಿಯ ಕುಂಜಿಬೆಟ್ಟು ಬಳಿ ಇರುವ ವೆಸ್ಟ್ ಸೈಡ್ ಮಳಿಗೆಯಲ್ಲಿ ಲಾಕರ್ ನಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ನಗದು ಕಳ್ಳತನವಾಗಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಕ್ಟೋಬರ್ 22ರಂದು ರಾತ್ರಿ ವ್ಯವಹಾರ ಮುಗಿದ ಬಳಿಕ ವ್ಯವಸ್ಥಾಪಕ ಪ್ರಕಾಶ್ ಹಾಗೂ ಸೆಕ್ಯೂರಿಟಿ ಗಾರ್ಡ್ ರಕ್ಷಿತ್ ಅವರು ಮಳಿಗೆಯ ಬಾಗಿಲು ಮುಚ್ಚಿದ್ದರು. ಮರುದಿನ ಲಾಕರ್ ತೆರೆದು ನೋಡಿದಾಗ ಲಾಕರ್ ನಲ್ಲಿ ಇಟ್ಟಿದ್ದ ಸುಮಾರು 10,10,336 ರೂಪಾಯಿ ನಗದು ಕಳವಾಗಿತ್ತು. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅ.22ರ ರಾತ್ರಿ 10.50 ರಿಂದ 11.35 ಸಮಯದ ಸಿಸಿ ಕ್ಯಾಮರ ದೃಶ್ಯಗಳನ್ನು ಡಿಲೀಟ್ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಅಂಗಡಿಯಲ್ಲಿ ಕೆಲಸಕ್ಕಿದ್ದವರನ್ನು ವಿಚಾರಿಸಲಾಗಿತ್ತು. ಆದರೆ ಯಾವುದೇ ಸುಳಿವು ಸಿಗದೇ ಇರುವುದರಿಂದ ಉಡುಪಿ ನಗರ ಠಾಣೆಗೆ ದೂರು ನೀಡಲಾಗಿದೆ
