
ಟಯರ್ ಸ್ಫೋಟಗೊಂಡು ಅಕ್ಕಿ ಸಾಗಾಟ ಮಾಡುತ್ತಿದ್ದ ಟೆಂಪೋವೊಂದು ಪಲ್ಟಿಯಾದ ಘಟನೆ ಉಡುಪಿಯ ಕಾಪು ಸಮೀಪದ ಎರ್ಮಾಳು ತೆಂಕ ಬಳಿ ನಡೆದಿದೆ.
ಕೋಟೇಶ್ವರದಿಂದ ಪಡುಬಿದ್ರೆಗೆ ಅಕ್ಕಿ ತುಂಬಿಸಿಕೊಂಡ ಸಾಗುತ್ತಿದ್ದ ಟೆಂಪೋ ಎರ್ಮಾಳ್ ತೆಂಕ ತಲುಪುತ್ತಿದ್ದಂತೆ ಟಯರ್ ಸ್ಫೋಟಗೊಂಡಿದೆ. ಹೀಗಾಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಟೆಂಪೋ ರಸ್ತೆಯಲ್ಲೇ ಪಲ್ಟಿಯಾಗಿದೆ. ಘಟನೆಯಿಂದಾಗಿ ಟೆಂಪೋದಲ್ಲಿದ್ದ ಅಕ್ಕಿಯ ಚೀಲಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿದ್ದವು. ಸ್ಥಳೀಯರು ಧಾವಿಸಿ ಅಕ್ಕಿ ಚೀಲಗಳನ್ನು ರಸ್ತೆ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸ್ಥಳಕ್ಕೆ ಪಡುಬಿದ್ರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
