

ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಾರಾಯಣ ನಗರ ರಸ್ತೆಯ ಬಳಿ ನಡೆದಿದೆ.
ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಹೊಂದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿತರಾದ ಬಂಟ್ವಾಳ ತಾಲೂಕಿನ ನರಿಂಗಾಣ ಗ್ರಾಮದ ಮಹಮ್ಮದ್ ಸಪಾಝ್ (29) ಹಾಗೂ ಪುತ್ತೂರು ಗ್ರಾಮದ ಸಂತೆಕಟ್ಟೆಯ ಚರಣ್ ಯು ಭಂಡಾರಿ (19) ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರನಾಯಕ್ ಮತ್ತು ಪ್ರೊಬೇಶನರಿ ಡಿ.ವೈ.ಎಸ್.ಪಿ. ಗೀತಾ ಪಾಟೀಲ್ ರವರ ನೇತೃತ್ವದಲ್ಲಿ ಉಪನಿರೀಕ್ಷಕರಾದ ಪವನ್ ನಾಯಕ್, ಸೆನ್ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ಪ್ರವೀಣ್, ರಾಜೇಶ್, ವೆಂಕಟೇಶ್, ನಿಲೇಶ್, ರಾಘವೇಂದ್ರ, ಪ್ರಶಾಂತ್ ಮತ್ತು ಚರಣ್‌ರಾಜ್ ರವರ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಬಂಧಿತ ಆರೋಪಿಗಳಿಂದ 53,300 ಸಾವಿರ ಮೌಲ್ಯದ 740 ಗ್ರಾಂ ತೂಕ ಗಾಂಜಾ, KA51AD 3933ನೇ HONDA ಕಂಪೆನಿಯ Activa ಸ್ಕೂಟರ್ ಅಂದಾಜು ಮೌಲ್ಯ ರೂ, 25,000, ನಗದು ರೂ, 2170 ಹಾಗೂ ಎರಡು ಮೊಬೈಲ್ ಪೋನ್ ಸಹಿತ ಒಟ್ಟು 98,770 ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.