ಬಸ್ ನಲ್ಲಿ ಇಟ್ಟಿದ್ದ ಹಣವನ್ನು ಕಳ್ಳತನ ಗೈದ ಘಟನೆ ಮಂಗಳೂರು- ಉಡುಪಿ ಖಾಸಗಿ ಬಸ್ ನಲ್ಲಿ ನಡೆದಿದೆ.
ಫೆ.1 ರಂದು ಮಧ್ಯಾಹ್ನ01.30 ರ ಸುಮಾರಿಗೆ ಮಂಗಳೂರಿನಿಂದ ಹೈದರಾಬಾದ್ ಗೆ ಹೊರಟಿರುವ ಖಾಸಗಿ ಬಸ್ ನಲ್ಲಿ ಈ ಘಟನೆ ನಡೆದಿದ್ದು, ಬಸ್ ನಲ್ಲಿ ಕ್ಲೀನರ್ ಕೆಲಸ ಮಾಡುತ್ತಿದ್ದ ಅರುಣ್ ರಾಜ್ ಸಜ್ಜನ್ ಎಂಬಾತನೇ ಕಳ್ಳತನ ನಡೆಸಿದ್ದಾನೆ ಎಂದು ಬಸ್ ಮಾಲಿಕ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಸ್ ಗೆ ಡಿಸೇಲ್ ಹಾಕಲೆಂದು ಚಾಲಕನಲ್ಲಿ 96500 ರೂ. ಕೊಟ್ಟಿದ್ದು, ಎಂದಿನಂತೆ ಚಾಲಕನ ಹಿಂಬದಿಯಲ್ಲಿರುವ ಡ್ಯಾಶ್ ಬಾಕ್ಸ್ ನಲ್ಲಿ ಹಣವನ್ನು ಇರಿಸಿದ್ದನು. ಉಡುಪಿ ಪೆರಂಪಳ್ಳಿ ಬಳಿ ಇರುವ ಪೆಟ್ರೋಲ್ ಪಂಪ್ ನಲ್ಲಿ ಡಿಸೇಲ್ ಹಾಕಲು ಹಣ ಕೊಡಲೆಂದು ಡ್ಯಾಶ್ ಬಾಕ್ಸ್ ತೆರೆದು ನೋಡುವಾಗ 96500 ಇರಲಿಲ್ಲ ಎಂದು ಚಾಲಕ ಮಾಲಕನಿಗೆ ಕರೆ ಮಾಡಿ ತಿಳಿಸಿದ್ದರು.
ಅದೇ ಬಸ್ ನಲ್ಲಿ ಕ್ಲೀನರ್ ಕೆಲಸ ಮಾಡುತ್ತಿದ್ದ ಅರುಣ್ ರಾಜ್ ಸಜ್ಜನ್ ಹೊಟ್ಟೆ ನೋವೆಂದು ಬಸ್ ನಿಂದ ಇಳಿದು ಹೋಗಿದ್ದು, ವಿಚಾರಿಸಲೆಂದು ಕರೆ ಮಾಡಿದಾಗ ಮಾಲೀಕನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾನೆ. ಅಲ್ಲದೇ ಒಳಬರುವ ಎಲ್ಲಾ ಕರೆಗಳನ್ನು ನಿಷೇಧಿಸಿರುತ್ತಾನೆ. ಮತ್ತು ಕೆಲಕ್ಕೂ ಬರದೇ ಇರುವುದರಿಂದ ಆತನೇ ಹಣವನ್ನು ಕಳವು ಗೈದಿದ್ದಾನೆ. ಈ ಬಗ್ಗೆ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.