ಜೈನಮುನಿ ಹತ್ಯೆ ಪ್ರಕರಣ : ತನಿಖೆಯನ್ನು ಚುರುಕುಗೊಳಿಸಿದ CID

ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇ ಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನಮುನಿ ಕಾಮ ಕುಮಾರ್ ನಂದಿ ಮಹಾರಾಜರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಐಡಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

 

ಹಿರೇ ಕೊಡಿ ನಂದಿ ಪರ್ವತ ಆಶ್ರಮದಲ್ಲಿದ್ದ ಜೈನಮನಿಗಳ ಕೊಠಡಿಯನ್ನು ಪರಿಶೀಲಿಸಿದರು. ಜೈನಮುನಿ ಮುನಿಗಳ ಮತ್ತು ದೇಹ ಕತ್ತರಿಸಿದ್ದ ಮಾವಿನಹೊಂಡ ಗುಡ್ಡಕ್ಕೂ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಜೈನ ಮುನಿಗಳ ಮೃತ ದೇಹವನ್ನು ತುಂಡು ತುಂಡು ಮಾಡಿದ ಹಂತಕರು ಕೊಳವೆ ಬಾಯಿಯಲ್ಲಿ ಎಸೆದ ಪ್ರಕರಣ ನಡೆದಿತ್ತು.ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಮಾವಿನಹೊಂಡದಲ್ಲಿ ಮೃತದೇಹ ಕತ್ತರಿಸಿದ ಸ್ಥಳದಲ್ಲಿ ಮತ್ತಷ್ಟು ಸಾಕ್ಷಿ ಕಲೆ ಹಾಕಿದ ಬೆಂಗಳೂರು ಮೈಸೂರು ನಿಂದ ಆಗಮಿಸಿರುವ ಎಫ್ ಎಸ ಎಲ್ ತಜ್ಞರು.ಎ1 ನಾರಾಯಣ ಮಾಳಿಗೆ ಸೇರಿದ ಗದ್ದೆಗು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದೆ ಎಂದು ತಿಳಿದು ಬಂದಿದೆ.

ಡಿವೈಎಸ್ಪಿ ಬಸವರಾಜ್ ಯಲಿಗಾರ್ ಸಿಪಿಐ ಆರ್ ಆರ್ ಪಾಟೀಲರಿಂದ ಮಾಹಿತಿ ಕಲೆ ಹಾಕಲಾಗಿದ್ದು, 20ಕ್ಕೂ ಹೆಚ್ಚು ಜನರ ವಿಚಾರಣೆ ಮಾಡಿರುವ ಸಿಐಡಿ ಅಧಿಕಾರಿಗಳ ತಂಡ ನಂದಿ ಪರ್ವತ ಆಶ್ರಮದ ಟ್ರಸ್ಟಿಗೆ ಸೇರಿದ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದರು.

Check Also

ವಂದೇ ಭಾರತ್‌ ಟಿಕೆಟ್‌ ದರ ಇಳಿಕೆ: ಸೋಮಣ್ಣ

ಬೆಂಗಳೂರು: ವಂದೇ ಭಾರತ್‌ ರೈಲು ಸಹಿತ ಎಲ್ಲ ರೈಲುಗಳ ದರ ಪಟ್ಟಿ ಪರಿಷ್ಕರಣೆ ಮಾಡುವ ಚಿಂತನೆ ಇದೆ ಎಂದು ರೈಲ್ವೇ …

Leave a Reply

Your email address will not be published. Required fields are marked *

You cannot copy content of this page.