November 23, 2024
sidd

ಬೆಂಗಳೂರು, ಮೇ 27: ತೀವ್ರ ಕುತೂಹಲ ಮೂಡಿಸಿದ್ದ ಸಿಎಂ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಮುಗಿದಿದ್ದು, ಸಚಿವ ಸ್ಥಾನದ ಜಿದ್ದಾಜಿದ್ದಿಗೆ ತೆರೆ ಬಿದ್ದಿದೆ. ಇಂದು ಎರಡನೇ ಹಂತದಲ್ಲಿ 24 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ಒಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸೇರಿದಂತೆ ಒಟ್ಟು 34 ಜನರ ಸರ್ಕಾರದ ಸಂಪುಟ ಸೇರಿದ್ದಾರೆ.

136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷ ಸಿಎಂ ಸ್ಥಾನ ಹೊರತು ಪಡಿಸಿ ಮತ್ತೆ ಯಾವ ವಿಚಾರದಲ್ಲೂ ರಾಜಕೀಯ ಕೆಸರೆರಚಾಟಕ್ಕೆ ಅವಕಾಶ ನೀಡದೇ ಸಂಪುಟ ವಿಸ್ತರಣೆ ಮಾಡಿದೆ.

ಇದೀಗ ಮತ್ತೊಂದು ಕುತೂಹಲಕ್ಕೂ ತೆರೆ ಬಿದ್ದಿದ್ದು, ಖಾತೆ ಹಂಚಿಕೆ ಕೂಡ ಅಂತಿಮವಾಗಿದೆ ಎನ್ನಲಾಗಿದೆ. ಸಂಪುಟ ವಿಸ್ತರಣೆ ಮುಗಿಯುತ್ತಿದ್ದಂತೆ ಖಾತೆ ಹಂಚಿಕೆ ಕೂಡ ಬಹುತೇಕ ಅಂತಿಮವಾಗಿದ್ದು, ಯಾವ..ಯಾವ ಸಚಿವರಿಗೆ ಯಾವ ಇಲಾಖೆಯ ಜವಾಬ್ದಾರಿ ಸಿಕ್ಕಿದೆ ಎನ್ನುವುದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ನೂತನ ಸಚಿವರಿಗೆ ಖಾತೆಗಳ ಹಂಚಿಕೆ: 

1.ಮುಖ್ಯಮಂತ್ರಿ ಸಿದ್ದರಾಮಯ್ಯ- ಹಣಕಾಸು, ಆಡಳಿತ ಸುಧಾರಣೆ, ವಾರ್ತಾ ಇಲಾಖೆ ಮತ್ತು ಹಂಚಿಕೆ ಮಾಡದ ಇತರ ಇಲಾಖೆಗಳು 

2.ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌- ಜಲಸಂಪನ್ಮೂಲ, ಬೆಂಗಳೂರು ಉಸ್ತುವಾರಿ

3.ಡಾ.ಜಿ.ಪರಮೇಶ್ವರ್- ಗೃಹ ಇಲಾಖೆ 

4.ಹೆಚ್.ಕೆ.ಪಾಟೀಲ್-ಕಾನೂನು ಸಂಸದೀಯ ಇಲಾಖೆ 5.ಕೆ.ಹೆಚ್.ಮುನಿಯಪ್ಪ-ಆಹಾರ ಇಲಾಖೆ

6.ಕೆ.ಜೆ.ಜಾರ್ಜ್-ಇಂಧನ ಇಲಾಖೆ 

7.ಎಂ.ಬಿ.ಪಾಟೀಲ್-ಬೃಹತ್ ಕೈಗಾರಿಕೆ ಇಲಾಖೆ, ಐಟಿ, ಬಿಟಿ 8.ರಾಮಲಿಂಗಾರೆಡ್ಡಿ- ಸಾರಿಗೆ ಇಲಾಖೆ 

9.ಸತೀಶ್ ಜಾರಕಿಹೊಳಿ-ಲೋಕೋಪಯೋಗಿ ಇಲಾಖೆ 

10.ಪ್ರಿಯಾಂಕ್ ಖರ್ಗೆ-ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ 

11.ಜಮೀರ್ ಅಹ್ಮದ್- ವಸತಿ,ವಕ್ಫ್ ಇಲಾಖೆ 

12.ಕೃಷ್ಣಬೈರೇಗೌಡ- ಕಂದಾಯ ಇಲಾಖೆ 

13.ದಿನೇಶ್ ಗುಂಡೂರಾವ್-ಆರೋಗ್ಯ ಕುಟುಂಬ ಕಲ್ಯಾಣ 

14.ಚೆಲುವರಾಯಸ್ವಾಮಿ- ಕೃಷಿ ಇಲಾಖೆ 

15.ಕೆ.ವೆಂಕಟೇಶ್-ಪಶುಸಂಗೋಪನಾ ಇಲಾಖೆ 16.ಹೆಚ್.ಸಿ.ಮಹದೇವಪ್ಪ- ಸಮಾಜಕಲ್ಯಾಣ ಇಲಾಖೆ 

17.ಈಶ್ವರ್ ಖಂಡ್ರೆ- ಅರಣ್ಯ ಮತ್ತು ಪರಿಸರ ಇಲಾಖೆ 18.ಕೆ.ಎನ್.ರಾಜಣ್ಣ- ಸಹಕಾರ ಇಲಾಖೆ 

19.ಶರಣಬಸಪ್ಪ ದರ್ಶನಾಪೂರ- ಸಣ್ಣ ಕೈಗಾರಿಕೆ ಇಲಾಖೆ 20.ಶಿವಾನಂದ ಪಾಟೀಲ್- ಜವಳಿ, ಸಕ್ಕರೆ ಖಾತೆ 21.ಆರ್.ಬಿ.ತಿಮ್ಮಾಪೂರ- ಅಬಕಾರಿ ಇಲಾಖೆ, ಮುಜರಾಯಿ
22.ಎಸ್.ಎಸ್.ಮಲ್ಲಿಕಾರ್ಜುನ್- ಗಣಿ‌ಮತ್ತು ಭೂ ವಿಜ್ಙಾನ ಇಲಾಖೆ 23.ಶಿವರಾಜ್ ತಂಗಡಗಿ-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 24.ಶರಣ ಪ್ರಕಾಶ್ ಪಾಟೀಲ್- ಉನ್ನತ ಶಿಕ್ಷಣ ಇಲಾಖೆ 

25.ಮಂಕಾಳ ವೈದ್ಯ- ಮೀನುಗಾರಿಕೆ ಬಂದರು ಇಲಾಖೆ 

26.ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 27.ರಹೀಂಖಾನ್- ಪೌರಾಡಳಿತ ಇಲಾಖೆ 

28.ಡಿ.ಸುಧಾಕರ್- ಮೂಲಸೌಕರ್ಯ,ಸಾಂಖ್ಯಿಕ ಇಲಾಖೆ 29.ಸಂತೋಷ್ ಲಾಡ್- ಕಾರ್ಮಿಕ ಕಲ್ಯಾಣ ಇಲಾಖೆ 30.ಎನ್.ಎಸ್.ಬೋಸರಾಜು-ಪ್ರವಾಸೋದ್ಯಮ ಇಲಾಖೆ 

31.ಬೈರತಿ ಸುರೇಶ್- ನಗರಾಭಿವೃದ್ಧಿ ಇಲಾಖೆ 

32.ಮಧು ಬಂಗಾರಪ್ಪ- ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆ 33.ಎಂ.ಸಿ.ಸುಧಾಕರ್- ವೈದ್ಯಕೀಯ ಶಿಕ್ಷಣ ಇಲಾಖೆ 

34.ಬಿ.ನಾಗೇಂದ್ರ- ಯುವಜನ ಕ್ರೀಡೆ ಇಲಾಖೆ ಮುಖ್ಯಮಂತ್ರಿ

 ಸಿದ್ದರಾಮಯ್ಯ ಖಾತೆ ಹಂಚಿಕೆ ನಾಳೆ ಅಂತಿಮವಾಗಲಿದೆ ಎಂದು ತಿಳಿಸಿದ್ದರೂ ಕೂಡ ಬಹುತೇಕ ಮಾಧ್ಯಮಗಳಲ್ಲಿ ಈ ಮೇಲಿನ ಪಟ್ಟಿಯಂತೆ ಖಾತೆ ಹಂಚಿಯಾಗಲಿದೆ ಎಂದು ವರದಿಯಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.