ಬೆಂಗಳೂರು: ಇಂದು ವಿಧಾನಸಭೆ ಕಲಾಪದಲ್ಲಿ ಬಿ.ಎಸ್ ಯಡಿಯೂರಪ್ಪ ಕೊನೆಯ ಅಧಿವೇಶದ ಭಾಷಣ ಮಾಡಿದ್ದರು. ಇದಕ್ಕೆ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ಬೆದರಿಕೆ ಕರೆ ಬಂದಾಗ ಯಡಿಯೂರಪ್ಪ ರಕ್ಷಣೆ ಕೊಟ್ಟಿದ್ದರು ಎಂದು ವಿಧಾನಸಭೆಯಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ.
ಬಿ.ಎಸ್ ಯಡಿಯೂರಪ್ಪ ರಕ್ಷಣೆ ಕೊಟ್ಟಿದ್ದರಿಂದ ಮುಕ್ತವಾಗಿ ಓಡಾಡಲು ಸಾಧ್ಯವಾಯ್ತು. ಜನರ ಕೆಲಸ ಫುಟ್ಬಾಲ್ ರೀತಿ ಆಗಬಾರದು. ಆಧಿಕಾರಿಗಳು ಕೆಲಸ ಮಾಡಬೇಕು, ನಾವು ನೇರಾನೇರ ಇರಬೇಕು. ಎಲ್ಲವನ್ನೂ ಗಳಿಸಿ ಪರಿಸ್ಥಿತಿ ವಿಷಮವಾದರೆ ಪ್ರಯೋಜನ ಆಗಲ್ಲ. ಟೆನ್ಷನ್ ರಹಿತ ರಾಜಕಾರಣ ಆಗಬೇಕು ಎಂದು ಯು.ಟಿ.ಖಾದರ್ ಹೇಳಿದರು.
ಇತ್ತ, ವಿಧಾನಪರಿಷತ್ನಲ್ಲಿ ಟಿ.ಎ.ಶರವಣ, ಯಡಿಯೂರಪ್ಪರನ್ನು ಹೊಗಳಿದ್ದಾರೆ. ಯಡಿಯೂರಪ್ಪ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ ಹೆಚ್.ಡಿ ಕುಮಾರಸ್ವಾಮಿ,ಸಿದ್ದರಾಮಯ್ಯ ಸ್ಥಾನವನ್ನೂ ತುಂಬಲು ಆಗಲ್ಲ ಎಂದರು. ಈ ವೇಳೆ ವಿಧಾನಪರಿಷತ್ ಸದಸ್ಯರು ಹೆಚ್.ಡಿ.ದೇವೇಗೌಡರ ಹೆಸರನ್ನು ನೆನಪಿಸಿದರು. ದೇವೇಗೌಡರು ದೇವರು ಬಿಡಿ ಎಂದು ಶರವಣ ಚರ್ಚೆ ಮುಂದುವರಿಸಿದರು ಎಂದರು.
ಇನ್ನು ವಿಧಾನಸಭೆಯಲ್ಲಿ ಸ್ಪೀಕರ್ ಕಾಗೇರಿ ಅವರನ್ನ ಹಾಡಿಹೊಗಳಿದ್ದಾರೆ. ಸಭಾಧ್ಯಕ್ಷರಾಗಿ ಸದನ ನಡೆಸಿದ ರೀತಿ ಎಲ್ಲರೂ ಮೆಚ್ಚುವಂತಹದ್ದು ಮುಂದಿನ ಅಧಿವೇಶನದಲ್ಲಿ ಸ್ಪೀಕರ್ ಪೀಠದಲ್ಲಿ ಕೂರದೇ ಸಚಿವರಾಗಿ. ಇದನ್ನು ನಾನು ಸಿಎಂಗೆ ಮನವಿ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ರು. ಈ ವೇಳೆ ಬಿ.ಎಸ್.ಯಡಿಯೂರಪ್ಪ ಮಾತಿಗೆ ಸ್ಪೀಕರ್ ಕಾಗೇರಿ ಧನ್ಯವಾದ ತಿಳಿಸಿದ್ದಾರೆ.