ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ. ರಾಜ್ಯದ 21 ಮಂದಿ ಟಾಪರ್‍ಸ್ ಯಾರು ಗೊತ್ತಾ..?! 

ಕರ್ನಾಟಕ, ಏ.21: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾದುಕುಳಿತಿದ್ದರು. ಕೊನೆಗೂ ಇಂದು ಏಪ್ರಿಲ್‌ 21ರಂದು ಫಲಿತಾಂಶ ಪ್ರಕಟವಾಗಿದೆ. ಹಾಗಾದರೆ ಪಿಯುಸಿ ಫಲಿತಾಂಶದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಈ ಬಾರಿ 2023ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೆ ಜಿಲ್ಲಾವಾರು ಫಲಿತಾಂಶವನ್ನು ನೋಡುವುದಾದರೆ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದೆ. ದ್ವಿತೀಯ ಸ್ಥಾನವನ್ನು ಉಡುಪಿ ಜಿಲ್ಲೆ ಅಲಂಕರಿಸಿದೆ. ಒಟ್ಟಾರೆ ಜಿಲ್ಲಾವಾರು ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಇಲ್ಲಿ ನೀಡಲಾಗಿದೆ.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ 

1.ಅಂಕೋಲಾದ ವಿಕಾಸ್ ಸಂಯೋಜಿತ ಪಿಯು ಕಾಲೇಜು ವಿದ್ಯಾರ್ಥಿ ಅನ್ವಿತಾ ಡಿ.ಎನ್ 600ಕ್ಕೆ 596 ಅಂಕ 

2. ಬೆಂಗಳೂರಿನ ಜಯನಗರ ಟ್ರಾನ್ಸೆಂಡ್ ಪಿಯು ಕಾಲೇಜು ವಿದ್ಯಾರ್ಥಿ ಛಾಯಾ ರವಿ ಕುಮಾರ್ 596 

3. ಎಕ್ಸಲೆಂಟ್ ಪಿಯು ಕಾಲೇಜು ಮೂಡುಬಿದರೆ ವಿದ್ಯಾರ್ಥಿ ಖುಷಿ ವೈ ಬಾಗಲಕೋಟೆ 596 

4. ಮಂಗಳೂರು ವಿಕಾಸ್ ಪಿಯು ಕಾಲೇಜು ವಿದ್ಯಾರ್ಥಿ ಸ್ವಾತಿ ಎಸ್‌ ಪೈ 596

5. ಬೆಂಗಳೂರು ಕ್ರೈಸ್ಟ್ ಪಿಯು ಕಾಲೇಜು ವಿದ್ಯಾರ್ಥಿ ಧನ್ಯಶ್ರೀ 596 

6. ಬೆಂಗಳೂರಿನ ಜಯನಗರ ಟ್ರಾನ್ಸೆಂಡ್ ಕಾಲೇಜು ವಿದ್ಯಾರ್ಥಿ ವರ್ಷಾ ಸತ್ಯನಾರಾಯಣ 596 

7. ಮೂಡುಬಿದಿರೆ ಆಳ್ವಾಸ್ ಪಿಯು ಕಾಲೇಜು ವಿದ್ಯಾರ್ಥಿ ಕೆ. ದಿಶಾ 596 8. ಬೆಂಗಳೂರು ರಾಜಾಜಿ ನಗರ ಎಎಸ್‌ಸಿ ಪಿಯು ಕಾಲೇಜು ವಿದ್ಯಾರ್ಥಿ ಇಂಚರಾ ಎನ್ 596

9. ಹೊಸೂರು ರೋಡ್ ಬೆಂಗಳೂರು ಕ್ರೈಸ್ಟ್ ಪಿಯು ಕಾಲೇಜು ವಿದ್ಯಾರ್ಥಿ ಗಾನಾ ಜೆ 596 

10. ರಾಜಾಜಿ ನಗರ ಎಎಸ್‌ಸಿ ಪಿಯು ಕಾಲೇಜು ವಿದ್ಯಾರ್ಥಿ ಶುಭಶ್ರೀ 595 

11. ಚನ್ನಸಂದ್ರ ಆರ್‌ಎನ್‌ಎಸ್‌ ಕಾಲೇಜು ವಿದ್ಯಾರ್ಥಿ ಪ್ರೀತಿ ಸುಧೀರ್ 595 

12. ತುಮಕೂರು ವಿದ್ಯಾನಿಧಿ ಪಿಯು ಕಾಲೇಜು ವಿದ್ಯಾರ್ಥಿ ಚಿನ್ಮಯಿ ಎಂ 595 

13. ಮಂಗಳೂರು ಕೆನರಾ ಪಿಯು ಕಾಲೇಜು ವಿದ್ಯಾರ್ಥಿ ಎನ್.ಪ್ರತೀಕ್ ಮಲ್ಯ 595 

14. ಬೆಂಗಳೂರು ಕ್ರೈಸ್ಟ್ ಅಕಾಡೆಮಿ ಪಿಯು ಕಾಲೇಜು ವಿದ್ಯಾರ್ಥಿ ಲಿಖಿತಾ ಸಿ 595 

15. ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿ ಆದಿತ್ಯ ನಾರಾಯಣ 595, 

16.ತುಮಕೂರು ರೋಡ್ ಜಿಂದಾಲ್ ಪಿಯು ಕಾಲೇಜು ವಿದ್ಯಾರ್ಥಿ ಪ್ರಿಯಾಂಕಾ ಎನ್ 595, 

17. ಬೆಂಗಳೂರು ಪದ್ಮನಾಭನಗರ ಕುಮರನ್ಸ್‌ ಕಾಲೇಜು ವಿದ್ಯಾರ್ಥಿ ಸುಮಂತ್ ಭಟ್ 595, 

18. ಬೆಂಗಳೂರು ಜಯನಗರ ಟ್ರಾನ್ಸೆಂಡ್ ಪಿಯು ಕಾಲೇಜು ವಿದ್ಯಾರ್ಥಿ ಯುವರಂಜನ ಶ್ರೀನಿವಾಸ್ ಮುರುಗನ್ 595 

19. ಶಿವಮೊಗ್ಗ ಸ್ವೆಟ್ ಇಂಡಿಪೆಂಡೆಂಟ್ ಕಾಲೇಜು ವಿದ್ಯಾರ್ಥಿ ನೇಹಾಶ್ರೀ 595, 

20. ತುಮಕೂರು ವಿದ್ಯಾನಿಧಿ ಪಿಯು ಕಾಲೇಜು ವಿದ್ಯಾರ್ಥಿ ಗೀತಾ 595,

21. ಮೈಸೂರು ಬಿಜಿಎಸ್‌ ಹೆಣ್ಮಕ್ಕಳ ಪಿಯು ಕಾಲೇಜು ವಿದ್ಯಾರ್ಥಿ ನಿಖಿತಾ ಪಿ 595 22. ಬೆಂಗಳೂರು ಜಯನಗರ ಸಮುದಾಯ ಕೇಂದ್ರ ಪಿಯು ಕಾಲೇಜು ವಿದ್ಯಾರ್ಥಿ ಸಹನಾ ಎನ್ 595 ಅಂಕ ಪಡೆದು ಟಾಪ್ ಲಿಸ್ಟ್‌ನಲ್ಲಿದ್ದಾರೆ.

Check Also

ಮಣಿಪಾಲ: ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಲಕ್ಷಾಂತರ ರೂ. ಹಣ ವರ್ಗಾವಣೆ

ಮಣಿಪಾಲ: ವ್ಯಕ್ತಿಯೊಬ್ಬರ ಖಾತೆಯಿಂದ ಮತ್ತೊಂದು ಖಾತೆಗೆ 2,08,004 ರೂ. ಹಣ ವರ್ಗಾವಣೆಗೊಂಡಿರುವ ಘಟನೆ ನಡೆದಿದೆ. ಕಾರ್ಕಳ ಪಳ್ಳಿ ನಿವಾಸಿ ಡಾ| ಗೋಪಿ ನಾಥ್‌ …

Leave a Reply

Your email address will not be published. Required fields are marked *

You cannot copy content of this page.