ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ದಿನಗಳಲ್ಲಿ ಭಾರೀ ಕಡಿತ! 244 ಶಾಲಾ ದಿನಗಳಲ್ಲಿ 180 ದಿನಗಳು ಮಾತ್ರ ಕಲಿಕಾ ದಿನಗಳು

ಬೆಂಗಳೂರು, ಏ. 20: ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕ್ರಿಯಾ ಯೋಜನೆ ಕುರಿತು ಪ್ರಮುಖ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಶಿಕ್ಷಣಾ ಇಲಾಖೆ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಶಿಕ್ಷಣ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ದಿನಗಳ ಸಂಖ್ಯೆಯಲ್ಲಿ 26 ದಿನಗಳು ಕಡಿತಗೊಂಡಿದೆ.

ಕೊರೊನಾ ಸಂಭವಿಸಿದ ಕಲಿಕೆಯ ನಷ್ಟವನ್ನು ಸರಿ ಪಡಿಸಲು, 2022-23 ಶೈಕ್ಷಣಿಕ ವರ್ಷವು ಸಾಮಾನ್ಯಕ್ಕಿಂತ ಮುಂಚಿತವಾಗಿ ಪ್ರಾರಂಭಗೊಂಡಿತ್ತು. ಕಳೆದ ವರ್ಷದಲ್ಲಿ ಹೆಚ್ಚುವರಿಯಾಗಿದ್ದ ಕಲಿಕಾ ಚೇತರಿಕೆ ಈ ವರ್ಷ ಇಲ್ಲದಿರುವುದು ಹಾಗೂ ದಸರಾ ರಜೆ ಹೆಚ್ಚಾಗಿರುವುದರಿಂದ ಈ ಬಾರಿ ಶಾಲಾ ದಿನಗಳು ಕಡಿಮೆಯಾಗಿವೆ. ಈ ವರ್ಷ ಒಟ್ಟು 244 ಶಾಲಾ ದಿನಗಳು ಇರಲಿದ್ದು, ಇದರಲ್ಲಿ 180 ದಿನಗಳು ಮಾತ್ರ ಕಲಿಕಾ ದಿನಗಳು ಇರಲಿವೆ.

ಎರಡು ವರ್ಷಗಳು ಕೊರೊನಾ ಕಾರಣದಿಂದ ಶಿಕ್ಷಣ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿತ್ತು. ಹೀಗಾಗಿ ಕಳೆದ ವರ್ಷ ಮಕ್ಕಳ ಶೈಕ್ಷಣಿಕ ಪ್ರಗತಿ ಹೆಚ್ಚಿಸಲು ಬೇಸಿಗೆ ರಜೆ ಬಳಿಕ ಮೇ ತಿಂಗಳ 14ರಿಂದ ಶಾಲೆಗಳನ್ನು ಪುನಾರಾಂಭಗೊಂಡಿತ್ತು. ಸದ್ಯ ಶಿಕ್ಷಣ ಕ್ಷೇತ್ರ ಯತಾಸ್ಥಿತಿಗೆ ಬಂದಿದ್ದು, ಈ ವರ್ಷ ಮೇ 29ರಿಂದ ಶಾಲೆ ಆರಂಭಗೊಳ್ಳಲಿದೆ.

ಇನ್ನು ಈ ಬಾರಿ ದಸರಾ ರಜೆ ಕೂಡ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಸಿಗಲಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಅಕ್ಟೋಬರ್ 3ರಿಂದ ಅಕ್ಟೋಬರ್ 16ರ ವರೆಗೆ 14 ದಿನ ಮಾತ್ರ ದಸರಾ ರಜೆ ನೀಡಲಾಗಿತ್ತು. ಆದರೆ ಈ ಬಾರಿ ಅಕ್ಟೋಬರ್ 8ರಿಂದ ಅಕ್ಟೋಬರ್ 25ರ ವರೆಗೆ ಒಟ್ಟು 20 ದಿನಗಳ ಕಾಲ ರಜೆ ನೀಡಲಾಗಿದೆ. ಇನ್ನು ಈ ಬಾರಿ ಜೂನ್‌, ಜುಲೈಯಲ್ಲಿ ಒಂದು ದಿನ ಮತ್ತು ಡಿಸೆಂಬರ್‌ನಲ್ಲಿ ಮೂರು ರಜಾ ದಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ರಜೆ ಸಿಗಲಿದೆ.

ಇನ್ನು 2022-23 ಶೈಕ್ಷಣಿಕ ವರ್ಷದ ಎಸ್‌ಎಸ್‌ಎಸ್‌ಸಿ ಪರೀಕ್ಷೆ ಕೂಡ ಮುಕ್ತಾಯಗೊಂಡಿದ್ದು, ಸದ್ಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಆರಂಭವಾಗಿದೆ. 

Check Also

BREAKING : ಶಿವಮೊಗ್ಗದಲ್ಲಿ ಎರಡು ಕಾರುಗಳ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೆ 3 ಸಾವು ಮೂವರು ಗಂಭೀರ

ಶಿವಮೊಗ್ಗ : ಇಂದು ಶಿವಮೊಗ್ಗದ ಲಯನ್ ಸಫಾರಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಎರಡು ಕಾರುಗಳ ನಡುವೆ ಭೀಕರ ಅಪಘಾತವಾಗಿದ್ದು, …

Leave a Reply

Your email address will not be published. Required fields are marked *

You cannot copy content of this page.