
ಹೆಬ್ರಿ : ಆಗುಂಬೆ ಘಾಟಿಯಲ್ಲಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಬ್ರಹ್ಮಾವರ ತಾಲೂಕಿನ ಶಶಾಂಕ್(21) ಮೃತಪಟ್ಟ ಬೈಕ್ ಸವಾರ. ಶಶಾಂಕ್ ಆತನ ಸಂಬಂಧಿಕಳಾದ ಯುವತಿಯ ಜತೆ ಬೈಕ್ನಲ್ಲಿ ಆಗುಂಬೆ ಕಡೆಯಿಂದ ಹೆಬ್ರಿ ಮೂಲಕ ಬ್ರಹ್ಮಾವರಕ್ಕೆ ತೆರಳುತ್ತಿದ್ದರು. ಬೈಕ್ ಆಗುಂಬೆ ಘಾಟಿಯ 2 ನೇ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದಾಗ ಏಕಾಏಕಿ ಸ್ಕಿಡ್ಡಾದ ಪರಿಣಾಮ ಎದುರಿನಿಂದ ಬರುತ್ತಿದ್ದ ಖಾಸಗಿ ಮಿನಿ ಬಸ್ಗೆ ಡಿಕ್ಕಿಯಾಗಿದೆ.
