

ಚಿಕ್ಕಮಗಳೂರು : ಬಸ್ ಚಲಿಸುತ್ತಿದ್ದಾಗಲೇ ಹಿಂಬದಿಯ ಟಯರ್ ಗಳು ಕಳಚಿ ಬಿದ್ದ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರೋಟರಿ ಸರ್ಕಲ್ ನಲ್ಲಿ ನಡೆದಿದೆ. ಅದೃಷ್ಟವಶಾತ್ ಬಸ್ ನಿಯಂತ್ರಣಕ್ಕೆ ಸಿಲುಕಿ ಸ್ಥಳದಲ್ಲೇ ನಿಂತಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಖಾಸಗಿ ಬಸ್ ಚಲಿಸುತ್ತಿರುವಾಗಲೇ ಹಿಂಬದಿಯ ಎರಡು ಟಯರ್ ಗಳು ಕಳಚಿ ನಿಂತಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೂದಲೆಳೆ ಅಂತರದಲ್ಲಿ ಭಾರೀ ದುರ್ಘಟನೆ ತಪ್ಪಿದೆ.
ಘಾಟಿ ಪ್ರದೇಶದಲ್ಲೂ ಬಸ್ ಸಂಚರಿಸಿದ್ದು ಅಲ್ಲೇನಾದರೂ ಸಂಭವಿಸಿದ್ದರೆ ದೊಡ್ಡ ಅವಘಡಕ್ಕೆ ಕಾರಣವಾಗುತ್ತಿತ್ತು.ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.