ಬೆಂಗಳೂರು, ಏ. 16; ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಏಪ್ರಿಲ್ 11ರಂದು ಅಧಿಸೂಚನೆ ಪ್ರಕಟವಾಗಿದ್ದು, ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನವಾಗಿದೆ. ಮೇ 10ರಂದು ಮತದಾನ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಯುವ ಮತದಾರರ ಚಿತ್ತ ಯಾವ ಕಡೆ? ಎಂದು ರಾಜಕೀಯ ಪಕ್ಷಗಳು ಚಿಂತನೆ ನಡೆಸುತ್ತಿವೆ.
ಮೇ 10ರಂದು ಫಲಿತಾಂಶ ಪ್ರಕಟವಾಗಲಿದೆ. ಯಾವ ಪಕ್ಷಕ್ಕೆ ಬಹುಮತ ಬರಲಿದೆ? ಎಂಬುದು ಕುತೂಹಲ. ರಾಜ್ಯದಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿರುವ ಸುಮಾರು 11 ಲಕ್ಷ ಯುವ ಮತದಾರರು ರಾಜ್ಯದಲ್ಲಿ ಅಧಿಕಾರ ಯಾರು ನಡೆಸಬೇಕು? ಎಂದು ತೀರ್ಮಾನ ಮಾಡಲಿದ್ದಾರೆ. ಆದ್ದರಿಂದ ಯುವಕರನ್ನು ಸೆಳೆಯಲು ಪಕ್ಷಗಳು ಸಹ ವಿವಿಧ ತಂತ್ರ ರೂಪಿಸುತ್ತಿವೆ.
ಜನವರಿ 2022 ರಿಂದ 2023ರ ತನಕ 18 ವರ್ಷ ತುಂಬಿದ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಮಾರ್ಚ್ ತನಕ 9.58 ಲಕ್ಷ ಯುವ ಮತದಾರರು ಮತದಾರರಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಚುನಾವಣಾ ಆಯೋಗ ಏಪ್ರಿಲ್ 11ರ ತನಕ ಮತದಾರರಪಟ್ಟಿ ಸೇರಲು ಅವಕಾಶ ನೀಡಿತ್ತು. ಪಟ್ಟಿಗೆ ಹೆಸರು ಸೇರಿಸಿದವರು ಈ ಬಾರಿಯ ಚುನಾವಣೆಯಲ್ಲಿಯೇ ಮತದಾನ ಮಾಡಬಹುದಾಗಿದೆ.