ಶಿಸ್ತಿನ ಪಕ್ಷವೆಂದು ಕೊಚ್ಚಿಕೊಳ್ಳುವ ಬಿಜೆಪಿಯಿಂದ ನಿಷ್ಠಾವಂತರ ಪಕ್ಷಾಂತರ: ಬಿ.ಕೆ. ಹರಿಪ್ರಸಾದ್
ಬೆಂಗಳೂರು, ಏ16: ಬಿಜೆಪಿಯಲ್ಲಿ ಟಿಕೆಟ್ ಭಿನ್ನಮತ ಮತ್ತು ಪಕ್ಷಾಂತರ ಪರ್ವಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಕಿಡಿಕಾರಿದ್ದಾರೆ.
ಬಿಜೆಪಿ ಶಿಸ್ತಿನ ಪಕ್ಷ, ದೇಶಭಕ್ತರು ಅಂತ ಕೊಚ್ಚಿಕೊಳ್ಳುತ್ತಿದ್ದರು. ಬಿಜೆಪಿ ಡೋಂಗಿ ಭಾಷಣ ಮಾಡಿದರೆ ಆಗೊಲ್ಲ. ಇದನ್ನ ಜನ ನಂಬೊಲ್ಲ. ಬಿಜೆಪಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡೋರಿಗೆ ಬೆಲೆ ಇಲ್ಲ. ಯಡಿಯೂರಪ್ಪ ಅವರನ್ನ ಮಾರ್ಗದರ್ಶ ಮಂಡಳಿಗೆ ಕಳುಹಿಸಿದ್ದಾರೆ. ಹೀಗೆ ಒಬ್ಬೊಬ್ಬರನ್ನಾಗಿ ಮಾರ್ಗ ಮಂಡಳಿಗೆ ಕಳುಹಿಸುತ್ತಾರೆ. ಬಿಜೆಪಿಯಲ್ಲಿ ಈಗ ಅಲ್ಲೋಲ ಕಲ್ಲೋಲ ಆಗಿದೆ. ಗುಜರಾತ್ ನಿಂದ ಬಂದ ಅಮಿತ್ ಶಾ ಮತ್ತು ಮೋದಿ ಕರ್ನಾಟಕ ಖರೀದಿಗೆ ಮುಂದಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಬಿಜೆಪಿಗೆ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿರುವ ವಿಚಾರ ಮತ್ತು ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಬಿಜೆಪಿ ಬಹಳ ಶಿಸ್ತಿನ ಪಕ್ಷ ಎನ್ನುತ್ತಿದ್ದರು. ಅಲ್ಲಿರೋದು ಅಂಧ ಭಕ್ತರು, ಡೋಂಗಿಗಳು ಅಂತಾ ಗೊತ್ತಾಗಿದೆ. ಕುದುರೆ ವ್ಯಾಪಾರಕ್ಕೆ ಖರೀದಿಯಾಗಿರೋರಿಗೆ ಮಾತ್ರ ಅಲ್ಲಿ ಬೆಲೆ. ಶೆಟ್ಟರ್ ಅದನ್ನ ತಿಳಿದುಕೊಳ್ಳಬೇಕಿತ್ತು, ಬಹಳ ಲೇಟ್ ಆಗಿ ತಿಳಿಯಿತು. ಶೆಟ್ಟರ್ ಒಬ್ಬ ಪ್ರಾಮಾಣಿಕ ಸಿಎಂ ಆಗಿದ್ದರು. ಅಂಥಹವರು ರಾಜಕಾರಣದಲ್ಲಿ ಇರಬೇಕು. ನಮ್ಮ ಪಕ್ಷಕ್ಕೆ ಬಂದ್ರೆ ಶಕ್ತಿ ಬರುತ್ತೆ. ಅವರು ಕಾಂಗ್ರೆಸ್ ಗೆ ಬಂದರೆ ಸ್ವಾಗತ ಎಂದಿದ್ದಾರೆ.