December 22, 2024
images (2)

ಬೆಂಗಳೂರು: ಯಜಮಾನಿಯರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಇಂದು ಸಂಜೆ ಒಳಗೆ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಆಗಲಿದ್ದು, ಇನ್ಮುಂದೆ ಪ್ರತಿ ತಿಂಗಳ ೧೫ ನೇ ತಾರೀಕ್‌ ಯಜಮಾನಿಯರ ಖಾತೆಗೆ ಹಣ ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಚುನಾವಣೆ ನೀತಿ ಸಂಹಿತೆಯಿಂದಾಗಿ ಜೂನ್‌ ತಿಂಗಳ ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು “ಗೃಹ ಲಕ್ಷ್ಮೀ” ಯೋಜನೆ (Gruha Lakshmi Scheme Karnataka) ಯನ್ನು ರೂಪಿಸಿದೆ.

ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಠಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಕುಟುಂಬದ ನಿರ್ವಹಣೆಯಲ್ಲಿ ಮನೆ ಯಜಮಾನಿಯ ಪಾತ್ರ ಬಹುದೊಡ್ಡದು. ಆದ್ದರಿಂದ ಮನೆಯ ನಿರ್ವಹಣೆಗೆ ಅನುಕೂಲವಾಲೆಂದು ಸರ್ಕಾರವು ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ರೂ.2,000 ಜಮಾ ಮಾಡಲು ಯೋಜನೆ ಅನುಷ್ಠಾನ ಮಾಡಿದೆ.ಹಣ ಸ್ಪಲ್ಪ ತಡವಾಗಿದೆ. ಹೀಗಾಗಿ ಇಂದು ಜೂನ್‌, ಜುಲೈ ತಿಂಗಳ ಗೃಹ ಲಕ್ಷ್ಮಿ ಹಣ ಖಾತೆಗೆ ಜಮಾ ಆಗಲಿದ್ದು, ಇನ್ಮುಂದೆ ಪ್ರತಿ ತಿಂಗಳ 15ರೊಳಗೆ ಹಣ ಪಾವತಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.