March 14, 2026
Capture

ಉಳ್ಳಾಲ: ಹವಾಮಾನ ಇಲಾಖೆ ಘೋಷಿಸಿದ ರೆಡ್ ಅಲರ್ಟ್ ನಡುವೆಯೂ ಯುವಕನೋರ್ವ ನದಿ ತೀರದಲ್ಲಿ ಮೀನುಗಾರಿಕೆಗೆ ತೆರಳಿ ದೋಣಿ ಮಗುಚಿಬಿದ್ದು ಹರೇಕಳ ನಿವಾಸಿ ಯುವಕರು ರಕ್ಷಿಸಿರುವ ಘಟನೆ ಪಾವೂರು ಹರೇಕಳ- ಅಡ್ಯಾರ್ ಸೇತುವೆಯ ಕೆಳಭಾಗ ನೇತ್ರಾವತಿ ನದಿಯಲ್ಲಿ ನಡೆದಿದೆ.

ಹರೇಕಳ ಕಡವಿನ ಬಳಿಯ ಸೇತುವೆ ಸಮೀಪದ ನೇತ್ರಾವತಿ ನದಿಯಲ್ಲಿ ಸ್ಥಳೀಯ ಯುವಕ ಮೀನುಗಾರಿಕೆಗೆಂದು ಬೆಳಿಗ್ಗೆ ತೆರಳಿದ್ದನು. ನಿರಂತರವಾಗಿ ಸುರಿದ ಮಳೆಯಿಂದಾಗಿ ನೀರಿನ ಹರಿವು ನದಿಯಲ್ಲಿ ಹೆಚ್ಚಾಗಿತ್ತು. ನೀರಿನ ರಭಸಕ್ಕೆ ದೋಣಿ ಏಕಾಏಕಿ ಮಗುಚಿಬಿದ್ದಿದ್ದು, ತಕ್ಷಣ ಸ್ಥಳದಲ್ಲಿದ್ದ ಯುವಕರ ತಂಡ ಸೇತುವೆ ಮೇಲಿನಿಂದ ನದಿಗೆ ಹಗ್ಗವನ್ನು ಇಳಿಸಿ ಮೇಲಕ್ಕೆತ್ತಿದ್ದಾರೆ. ದೋಣಿ ನೀರುಪಾಲಾಗಿದೆ.ರಕ್ಷಣೆಯ ವೀಡಿಯೋ ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.