

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮಹಿಳಾ ಪ್ರೀಮಿಯರ್ ಲೀಗ್ ( WPL) ನ ಮೊದಲ ಸೀಸನ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡದ ‘ಟೀಮ್ ಮೆಂಟರ್’ ಆಗಿ ನೇಮಕಗೊಂಡಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ ಮಾರ್ಚ್ 4 ರಂದು ನಡೆಯಲಿದೆ. ಸಾನಿಯಾ ಮಿರ್ಜಾ ಅವರನ್ನು ಮಾರ್ಗದರ್ಶಕರಾಗಿ ನೇಮಿಸಿದ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖ್ಯಸ್ಥ ಮತ್ತು ಉಪಾಧ್ಯಕ್ಷ ರಾಜೇಶ್ ವಿ ಮೆನನ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಸಾನಿಯಾ ಮಿರ್ಜಾ ಅವರನ್ನು RCB ಮಹಿಳಾ ತಂಡದ ಮಾರ್ಗದರ್ಶಕರಾಗಿ ಸ್ವಾಗತಿಸಲು ನಮಗೆ ಸಂತೋಷವಾಗಿದೆ.. ಆಕೆಯ ಆಟದ ವೃತ್ತಿಜೀವನದಲ್ಲಿ ಅನೇಕ ಸವಾಲುಗಳ ಹೊರತಾಗಿಯೂ, ಅವರ ಸಂಪೂರ್ಣ ಕಠಿಣ ಪರಿಶ್ರಮ, ಉತ್ಸಾಹ ಮತ್ತು ದೃಢಸಂಕಲ್ಪದಿಂದ ಆಕೆಯ ಯಶಸ್ಸಿನೊಂದಿಗೆ ಅವಳು ಪರಿಪೂರ್ಣ ಮಾದರಿಯಾಗಿದ್ದಾರೆ ಎಂದಿದ್ದಾರೆ.
ಮಿರ್ಜಾ ಆರು ಗ್ರ್ಯಾನ್‌ಸ್ಲಾಮ್‌ಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತ ಇದ್ದು, ಅವರು ಜನವರಿಯಲ್ಲಿ 2023 ಆಸ್ಟ್ರೇಲಿಯನ್ ಓಪನ್‌ನಲ್ಲಿ ತಮ್ಮ ಕೊನೆಯ ಪ್ರಮುಖ ಪಂದ್ಯಾವಳಿಯನ್ನು ಆಡಿದ್ದರು.
While our coaching staff handle the cricket side of things, we couldn’t think of anyone better to guide our women cricketers about excelling under pressure.
Join us in welcoming the mentor of our women's team, a champion athlete and a trailblazer!
Namaskara, Sania Mirza!
pic.twitter.com/r1qlsMQGTb
— Royal Challengers Bengaluru (@RCBTweets) February 15, 2023