ಹೊಸಂಗಡಿ, ಎ. 16: ಜನುಮ ದಿನವನ್ನು ವಿವಿಧ ಮಾದರಿಗಳಲ್ಲಿ ಆಚರಿಸುವ ಪದ್ದತಿ ಇಂದೂ ನಮ್ಮಲ್ಲಿದೆ. ದೀಪ ಉರಿಸಿ ಹುಟ್ಟುಹಬ್ಬ ಆಚರಿಸುವವರು ನಮ್ಮಲ್ಲಿದ್ದರೆ ದೀಪ ಆರಿಸಿ ಆಚರಿಸುವವರೂ ಇದ್ದಾರೆ. ಆದರೆ ವಿಷಯ ಅದಲ್ಲ. ಇಲ್ಲೊಬ್ಬ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ಹಲವು ವರ್ಷಗಳಿಂದ ಗಿಡನೆಟ್ಟು ತನ್ನ ಹುಟ್ಟುಹಬ್ಬವನ್ನು ಆಚರಿಸಿಸುತ್ತಾ ರಾಜ್ಯಕ್ಕೇ ಮಾದರಿಯಾಗಿದ್ದಾರೆ.
ಹೌದು, ಹೊಸಂಗಡಿ ಗ್ರಾ.ಪಂ. ಪಿಡಿಒ ಗಣೇಶ್ ಶೆಟ್ಟಿ ಅವರು ಗಿಡ ನೆಡುವ ಮೂಲಕ ಹುಟ್ಟುಹಬ್ಬ ಆಚರಿಸಿ ಸಮಾಜಕ್ಕೆ ಪ್ರೇರಣದಾಯಕರಾದವರು.
ಗ್ರಾ.ಪಂ.ನ ಓರ್ವ ಸರಕಾರಿ ಅಧಿಕಾರಿಯಾಗಿದ್ದರೂ ಪ್ರಗತಿಪರ ಕೃಷಿಕರು ಕೂಡಾ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಇವರು ಅದರ ಚಿತ್ರಗಳನ್ನು ಫೇಸ್‌ಬುಕ್ ವಾಲ್ ಗಳಲ್ಲಿ ಪೋಸ್ಟ್ ಮಾಡುತ್ತಾ ದೇಶದ ಕೃಷಿಕರಿಗೆ, ರೈತರಿಗೆ ಬೆಂಬಲ, ಪ್ರೋತ್ಸಾಹ ಮತ್ತು ಧೈರ್ಯ ತುಂಬುವವರು. ಇವರೊಬ್ಬ ಪ್ರಾಮಾಣಿಕ ಮತ್ತು ಸರಳತೆಯ ಅಧಿಕಾರಿ. ಹಾಗಂತ ನಾವು ಹೇಳುವುದಲ್ಲ. ಮಳೆಗಾಲದಲ್ಲಿ ಮಳೆನೀರು ಪಂಚಾಯತ್ ಮಣ್ಣಿನ ರಸ್ತೆಗಳ ಮೇಲೆ ಅರಿಯುವಾಗ ಹಾರೆ ಹಿಡಿದು ಚರಂಡಿಗೆ ಬಿಡುವ ಇವರ ಕೆಲಸ ಸರಳತೆ ಮತ್ತು ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ. ಈ ಮಧ್ಯೆ ಎ. ೧೬ರಂದು ಅವರು ಹುಟ್ಟುಹಬ್ಬವನ್ನು ರೋಟರಿ ಬರ್ತ್‌ಡೆ ವನ ಅನ್ನುವ ಹೆಸರಿನಲ್ಲಿ ಗಿಡನೆಟ್ಟು ಪರಿಸರ ಸಂರಕ್ಷಣೆಗೆ ಪ್ರೇರಣದಾಯಕರಾಗಿದ್ದಾರೆ.
ವಿಶಿಷ್ಟ ರೀತಿಯಲ್ಲಿ ಆಚರಿಸಲು ಸಹಕರಿಸಿದವರಿಗೆ ಕೃತಜ್ಞತೆಗಳು
ನೆಟ್ಟು ಹೆಮ್ಮರವಾಗಿ ಬೆಳೆಯುವ ಗಿಡ ಹೇಗೆ ಯಾವುದೇ ಪ್ರತಿಫಲ ಅಪೇಕ್ಷೆ ಪಡೆಯದೆ ಪರೋಪಕಾರಿ ಆಗಿರುತ್ತದೆ ಆಗೆಯೇ ನಾವು ಮರದ ಗುಣ ಬೆಳೆಸಿಕೊಳ್ಳಬೇಕು.
ತನ್ನ ಹುಟ್ಟಿದ ದಿನವನ್ನು, ನನ್ನ ಜೊತೆ ಬದ್ಯಾರು ಅಂಗನವಾಡಿ ಕೇಂದ್ರಕ್ಕೆ ಅವಶ್ಯಕ ಬಾಲ ಸ್ನೇಹಿ ಆಸನಗಳು, ಮತ್ತು ಇತರ ವಸ್ತುಗಳನ್ನು ನೀಡಿ, ಅಲ್ಲದೆ ಸಿದ್ಧಕಟ್ಟೆ ವಲಯ ಬಂಟರ ಸಂಘದಲ್ಲಿ ನಡೆಯುತ್ತಿರುವ ನೃತ್ಯ ತರಬೇತಿ ಪುಟಾಣಿಗಳಿಗೆ ಮಧ್ಯಾಹ್ನದ ಊಟ ದ ವ್ಯವಸ್ಥೆಯನ್ನು ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿರುವ ನನ್ನ ಪ್ರೀತಿಯ ಸಹೋದರ ಉದಯೋನ್ಮುಖ ಪ್ರತಿಭೆ ಯತಿನ್ ಶೆಟ್ಟಿ ಕರೆಂಕಿಲ ಇವರಿಗೆ ಉಜ್ವಲ ಭವಿಷ್ಯವನ್ನು ಹಾರೈಸುತ್ತೇನೆ. ನನಗೂ ಹುಟ್ಟಿದ ದಿನವನ್ನು ವಿಶಿಷ್ಟವಾಗಿ ಆಚರಿಸಲು ಸಹಕರಿಸಿದ ಬದ್ಯಾರ್ ಅಂಗನವಾಡಿ ಶಿಕ್ಷಕಿಯವರಿಗೆ, ಸಿದ್ಧಕಟ್ಟೆ ವಲಯ ಬಂಟರ ಸಂಘದ ಪದಾಧಿಕಾರಿಗಳು, ಮತ್ತು ನನ್ನ ಮಿತ್ರ ಯತಿನ್ ರವರಿಗೆ ಪ್ರೀತಿಯ ಕೃತಜ್ಞತೆಗಳು.
ಗಣೇಶ್ ಶೆಟ್ಟಿ, ಪಿಡಿಒ ಹೊಸಂಗಡಿ