ವೇಣೂರು: ತೋಮಸ್ ಎಂ.ಎಂ. ನಿರ್ದೇಶನದ ಮಗಳು ಕನ್ನಡ ಚಲನಚಿತ್ರ ಎ. ೧೪ರಿಂದ ಮೂಡಬಿದಿರೆಯ ಅಮರಶ್ರೀ ಚಿತ್ರಮಂದಿರದಲ್ಲಿ ಮತ್ತೆ ಪ್ರದರ್ಶನಗೊಂಡಿದೆ. ಶಿಕ್ಷಣದಲ್ಲಿ ಮಕ್ಕಳು ಎದುರಿಸುವ ಸವಾಲುಗಳನ್ನು ಮಗಳು ಚಿತ್ರದಲ್ಲಿ ಬಿಚ್ಚಿಡಲಾಗಿದ್ದು, ಸವಾಲುಗಳನ್ನು ಎದುರಿಸಿ ಬದುಕುವ ಓರ್ವ ಮಗಳು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಯಾವ ರೀತಿ ಬೇಳಕು ನೀಡುತ್ತಾಳೆ ಅನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಪೋಷಕರು ಮತ್ತು ಮಕ್ಕಳಿಗೆ ಒಂದು ಅತ್ಯುತ್ತಮವಾದ ಸಂದೇಶ ಸಾರುವ ಚಿತ್ರ ಇದಾಗಿದೆ. ಈಗಾಗಿ ಸಂಜೆ ೪ ಗಂಟೆಯ ಪ್ರದರ್ಶನಕ್ಕೆ ಹೆತ್ತವರೊಂದಿಗೆ ಮತ್ತು ಶಿಕ್ಷಕರೊಂದಿಗೆ ಬರುವ ಎಸ್‌ಎಸ್‌ಎಲ್‌ಸಿ ಒಳಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದೆ. ಆದರೆ ಪೋಷಕರ ಟಿಕೆಟ್‌ಗೆ ಹಣ ಪಾವತಿಸಬೇಕು ಎಂದು ಚಿತ್ರದ ನಿರ್ಮಾಪಕ ತೋಮಸ್ ಎಂ.ಎಂ. ತಿಳಿಸಿದ್ದಾರೆ.