May 25, 2025
raghavendra bhat copy

ಆರಂಬೋಡಿ, ಮೇ 13: ಈ ಬಾರಿ ಕುಡಿಯುವ ನೀರಿಗೆ ವ್ಯಾಪಕ ಹಾಹಾಕಾರ ಕಂಡು ಬಂದಿದೆ. ಕೃಷಿ ನೀರಿಗೂ ತೊಂದರೆ ಎದುರಾಗಿ ಅಡಿಕೆ ಮರಗಳು ಒಣಗಲು ಆರಂಭಿಸಿದೆ. ಆದರೆ ಕಳೆದ ಎರಡು ಮೂರು ದಿನಗಳಿಂದ ಅಲ್ಪ ಪ್ರಮಾಣದ ಮಳೆಯಿಂದ ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿದೆ. ಕುಡಿಯುವ ನೀರಿಗೆ ಭರ ಇನ್ನೂ ಕಡಿಮೆಯಾಗಿಲ್ಲ.

ಕುಡಿಯುವ ನೀರೇ ಇಲ್ಲದ ಸಂದರ್ಭ ಆರಂಬೋಡಿ ಸನಿಹ ಹೊಕ್ಕಾಡಿಗೋಳಿಯ ರೋ| ರಾಘವೇಂದ್ರ ಭಟ್ ಅವರು ಎಲಿಯನಡುಕೋಡು ಗ್ರಾಮದ ಉಪ್ಪಿರ ಪರಿಸರದ ಸರಿಸುಮಾರು ೪೦ ಮನೆಗಳಿಗೆ ಹಲವು ದಿನಗಳಿಂದ ಉಚಿತವಾಗಿ ವಾಹನದ ಮೂಲಕ ನೀರು ಸರಬರಾಜು ಮಾಡಿ ಮಾನವೀಯತೆ ಮರೆದು ಮಾದರಿಯಾಗಿದ್ದಾರೆ.
ಎಲಿಯನಡುಗೋಡು ಗ್ರಾಮದ ಉಪ್ಪಿರದಲ್ಲಿ ಪಂಚಾಯತ್ ಕೊಳವೆಬಾವಿಗಳು ಕೈಕೊಟ್ಟಿದ್ದು ಜನ ಕುಡಿಯುವ ನೀರಿಗೆ ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಮನಗಂಡ ಸ್ಥಳೀಯ ಪ್ರಗತಿಪರ ಕೃಷಿಕರು, ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಭಟ್ ಅವರು ಹಲವು ದಿನಗಳಿಂದ ಜನರಿಗೆ ಉಚಿತವಾಗಿ ನೀರು ಸರಬರಾಜು ಮಾಡುತ್ತಿದ್ದಾರೆ. ತಮ್ಮ ಮನೆಯ ಬೋರ್‌ವೆಲ್ ನೀರನ್ನೇ ಟ್ಯಾಂಕ್‌ಗೆ ತುಂಬಿ ಅದನ್ನು ವಾಹನದ ಮೂಲಕ ಉಪ್ಪಿರ ಪರಿಸರದ ಸರಬರಾಜು ಮಾಡುತ್ತಿದ್ದಾರೆ. ನೀರು ಸಾಗಿಸಲು ವಾಹನ, ಸಿಬ್ಬಂದಿಯ ಖರ್ಚನ್ನೂ ತಾವೇ ಭರಿಸಿ ಮಾದರಿ ಎಣಿಸಿಕೊಂಡಿದ್ದಾರೆ. ಹಿಂದೆಯೂ ಈ ಭಾಗದಲ್ಲಿ ನೀರಿನ ಸಮಸ್ಯೆ ಉಂಟಾದಾಗ ರಾಘವೇಂದ್ರ ಭಟ್ ಅವರು ಇದೇ ರೀತಿ ನೀರು ಪೂರೈಕೆ ಮಾಡಿದ್ದರು.

ಕೃಷಿಗೆ ಉಚಿತ ವಿದ್ಯುತ್ ಸಲ್ಲದು
ದ.ಕ. ಜಿಲ್ಲೆಯಲ್ಲಿ ಕೃಷಿಭೂಮಿ ಉಳಿಯಬೇಕಾದರೆ ಅವೈಜ್ಞಾನಿಕವಾಗಿ ಕೃಷಿಗೆ ನೀರುಣಿಸುವುದು ಕಡಿಮೆಯಾಗಬೇಕು. ಸರಕಾರ ಉಚಿತವಾಗಿ ವಿದ್ಯುತ್ ಒದಗಿಸುವುದನ್ನು ಕಡಿತಗೊಳಿಸಬೇಕು. ಆಗ ಮಾತ್ರ ನೀರು ವ್ಯರ್ಥವಾಗದೆ ಸದ್ಬಳಕೆ ಆಗುತ್ತದೆ.

ರೋ| ರಾಘವೇಂದ್ರ ಭಟ್ , ಹೊಕ್ಕಾಡಿಗೋಳಿ

About The Author

Leave a Reply

Your email address will not be published. Required fields are marked *

<p>You cannot copy content of this page.</p>