ವೇಣೂರು: 2023ರ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು (ಸೋಮವಾರ, ಮೇ 8) ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ ಶೇಕಡಾ 83.89 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅಲ್ಲದೇ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲೂ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶೇಕಡಾ 86.74. ಫಲಿತಾಂಶ ಬಂದಿದ್ದರೆ, ಅನುದಾನ ರಹಿತ ಶಾಲೆಗಳಲ್ಲಿ ಶೇ.90.89 ಫಲಿತಾಂಶ ಬಂದಿದೆ. ಅನುದಾನಿತ ಶಾಲೆಯಲ್ಲಿ ಶೇ.85.64ರಷ್ಟು ಫಲಿತಾಂಶ ಬಂದಿದೆ. 14,983 ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದಿದ್ದಾರೆ. ವೇಣೂರು ಹೋಬಳಿ ಮಟ್ಟದ 9 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿ ದಾಖಲೆ ನಿರ್ಮಿಸಿದೆ.
ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ಶಾಲೆ
ಕುಕ್ಕೇಡಿ: ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ಶಾಲೆಯು ಶೇ. 100 ಫಲಿತಾಂಶ ದಾಖಲಿಸಿದೆ. ಸಿಂಚನಾ ಭಟ್ 584, ಸಮೀಕ್ಷಾ 572, ಪ್ರಣತಿ ಹೆಬ್ಬಾರ್ 568 ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಅಳದಂಗಡಿ ಸಂತಪೀಟರ್ ಕ್ಲೇವರ್, ಪಿಲ್ಯದ ಗುಡ್ ಫ್ಯೂಚರ್
ಅಳದಂಗಡಿ: ಇಲ್ಲಿಯ ಸಂತಪೀಟರ್ ಕ್ಲೇವರ್ ಆಂಗ್ಲಮಾಧ್ಯಮ ಶಾಲೆಯು ಶೇ. 100 ಫಲಿತಾಂಶ ದಾಖಲಿಸಿದ್ದು,
ವಿಭಾ 618, ಅಕ್ಷರ 612, ಆಕಾಶ್ 606 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಪಿಲ್ಯದ ಗುಡ್ ಫ್ಯೂಚರ್ ಆಂಗ್ಲಮಾಧ್ಯಮ ಶಾಲೆಯೂ ಶಾಲೆಯೂ ಶೇ. 100 ಫಲಿತಾಂಶ ದಾಖಲಿಸಿದೆ.
ನಾರಾವಿ ಸಂತ ಪೌಲ್
ನಾರಾವಿ: ಇಲ್ಲಿಯ ಸಂತ ಪೌಲ್ ಆಂಗ್ಲಮಾಧ್ಯಮ ಶಾಲೆಯು ಶೇ. 100 ಫಲಿತಾಂಶ ದಾಖಲಿಸಿದೆ. 8 ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಇದರಲ್ಲಿ ಗಜೇರಹರ್ಮಿಭೂಪತಬಾಯಿ ಶೇ. 93.12 ಅಂಕ ಗಳಿಸಿದ ವಿದ್ಯಾರ್ಥಿಯಾಗಿದ್ದಾನೆ.
ವೇಣೂರು ಸರಕಾರಿ ಪ್ರೌಢಶಾಲೆ ಆಂಗ್ಲಮಾಧ್ಯಮ ವಿಭಾಗ
ವೇಣೂರು: ಇಲ್ಲಿಯ ಸರಕಾರಿ ಪ್ರೌಢಶಾಲೆ ಆಂಗ್ಲಮಾಧ್ಯಮ ವಿಭಾಗವು ಈ ಬಾರಿಯೂ ಶೇ. 100 ಫಲಿತಾಂಶ ದಾಖಲಿಸಿದೆ. ಶ್ರಾವ್ಯ 611, ರಿತೀಷಾ (607), ತೇಜಸ್ (605), ರಿಷಿತ್ (604) ಅಂಕ ಗಳಿಸಿದ್ದಾರೆ.
ಕನ್ನಡ ಮಾಧ್ಯಮದಲ್ಲಿ 190 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 180 ಮಂದಿ ಉತ್ತೀರ್ಣರಾಗಿದ್ದು, ಶೇಕಡಾ 95 ಫಲಿತಾಂಶ ದಾಖಲಿಸಿದೆ.
ವೇಣೂರು ನವಚೇತನ ಆಂಗ್ಲಮಾಧ್ಯಮ ಶಾಲೆ, ಕೊಕ್ರಾಡಿ ಸರಕಾರಿ ಪ್ರೌಢಶಾಲೆ, ವೇಣೂರು ವಿದ್ಯೋದಯ ಆಂಗ್ಲಮಾಧ್ಯಮ ಶಾಲೆ ಹಾಗೂ ಹೊಸಂಗಡಿ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯೂ ಶೇ. 100 ಫಲಿತಾಂಶ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.