ಉಳ್ಳಾಲ ಬೀಚ್ ನಲ್ಲಿ ಮರಳಿನ‌ ಆಕೃತಿ ಮೂಲಕ ಮತದಾನ ಜಾಗೃತಿ

ಉಳ್ಳಾಲ: ದಿನಾಂಕ 19-04-2024 ಉಳ್ಳಾಲ ಬೀಚ್ ನಲ್ಲಿ ತಾಲೂಕು ಪಂಚಾಯತ್ ಉಳ್ಳಾಲ ಹಾಗೂ ಉಳ್ಳಾಲ ನಗರ ಸಭೆ, ಕೋಟೆಕಾರ್ ಪಟ್ಟಣ ಪಂಚಾಯತ್, ಸೋಮೆಶ್ವರ ಪುರಸಭೆ ಸಹಭಾಗಿತ್ವದಲ್ಲಿ ಮರಳು ಆಕೃತಿ ಜತೆಗೆ ಮೇಣದ ಬತ್ತಿ ಬೆಳಗುವ ಮೂಲಕ ಮತದಾನ‌ ಜಾಗೃತಿ ಸಭೆ ನಡೆಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಶೀನಶೆಟ್ಟಿ ಹಾಗೂ ಕೃಷ್ಣಪ್ಪ ಮೂಲ್ಯರು ನೆರೆದಿದ್ದವರಿಂದ ಮತದಾನ ಘೋಷಣೆ ಮೊಳಗಿಸಿದರು. ನಂತರ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್.ಕೆ ಐಎಎಸ್ ಅವರು ಬೆಲೂನ್ ಹಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಎಪ್ರಿಲ್ 26ಕ್ಕೆ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಹಲವಾರು ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.ಇಲ್ಲಿ ಮರಳಿನ ಆಕೃತಿ ರಚಿಸುವ ಮೂಲಕ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ತಿಳಿಸಿದರು.

ಈ ವೇಳೆ ಮತದಾನಕ್ಕೆ ಸಂಬಂಧಪಟ್ಟಂತೆ ಚುನಾವಣಾ ಪರ್ವ ದೇಶದ ಗರ್ವ ಘೋಶವಾಕ್ಯವನ್ನು ಒಳಗೊಂಡ ಮರುಳಿನ ಆಕೃತಿ ಸಮುದ್ರ ಕಿನಾರೆಯಲ್ಲಿ ನೆರೆದಿದ್ದವರ ಗಮನಸೆಳೆಯಿತು. ಅಷ್ಟೇ ಅಲ್ಲದೇ ಜಾನಪದ ಕಲೆಯಾದ ದುಡಿಕಲೆಯನ್ನು ಸಹ ಈ ವೇಳೆ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಶೈಲಾ ಕೆ ಕಾರಿಗಿ, ಶ್ರೀ ರಾಘವೇಂದ್ರ ಪೌರಾಯುಕ್ತರು ಉಳ್ಳಾಲ ನಗರಸಭೆ, ಶ್ರೀ ಆನಂದ ಸೆರೆಗೊಪ್ಪ ಮುಖ್ಯ ಅಧಿಕಾರಿ ಕೋಟೆಕಾರ್ ಪಟ್ಟಣ ಪಂಚಾಯತ್, ಶ್ರೀ ರಾಜು ಮುಖ್ಯ ಅಧಿಕಾರಿ ಸೋಮೇಶ್ವರ ಪುರಸಭೆ ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿಗಳು,ಗ್ರಾಮ ಪಂಚಾಯತ್ ಸಿಬ್ಬಂದಿಗಳು, ನಗರ ಸಭೆ ಸಿಬ್ಬಂದಿಗಳು, ಪುರಸಭೆ ಸಿಬ್ಬಂದಿಗಳು,ಪಟ್ಟಣ ಪಂಚಾಯತ್ ಸಿಬ್ಬಂದಿಗಳು, ಸ್ವೀಪ್ ಮಾಸ್ಟರ್ ಟ್ರೈನರ್ ಶರಣ್ಯ ಶೆಟ್ಟಿ, ಪೌರಕಾರ್ಮಿಕರು, ನರ್ಸಿಂಗ್ ವಿದ್ಯಾರ್ಥಿಗಳು ಹಾಜರಿದ್ದರು. ಶ್ರೀ ರಮೇಶ್ ನಾಯ್ಕ್ ಸಹಾಯಕ ನಿರ್ದೇಶಕರು (ಗ್ರಾ&ಉ) ವಂದಿಸಿದರು. ಸ್ವೀಪ್ ಮಾಸ್ಟರ್ ಟ್ರೈನರ್ ಸಚೇತ್ ಕುಮಾರ್ ಸುವರ್ಣ ಕಾರ್ಯಕ್ರಮ‌ ನಿರೂಪಿಸಿದರು. ಹಾಗೂ ಬಾಳೆಪುಣೆ ಗ್ರಾ.ಪಂ‌ ಸೇರಿದಂತೆ ಉಳ್ಳಾಲ‌ ತಾ.ಪಂ ನ ಎಲ್ಲಾ ಗ್ರಾ.ಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಹಕರಿಸಿದರು.

Check Also

ಪೆನ್‌ಡ್ರೈವ ಹಂಚಿಕೆ ಪ್ರಕರಣ – ಕೊನೆಗೂ ಅರೆಸ್ಟ್ ಆದ ಸಚಿವ ಜಮೀರ್ ಶಿಷ್ಯ ನವೀನ್, ಚೇತನ್

ಬೆಂಗಳೂರು : ಹಾಸನ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಆರೋಪದಲ್ಲಿ ಸಚಿವ ಜಮೀರ್ ಶಿಷ್ಯ ನವೀನ್ ಗೌಡ ಹಾಗೂ ಚೇತನ್‌ನನ್ನ …

Leave a Reply

Your email address will not be published. Required fields are marked *

You cannot copy content of this page.