ಸಾಂತಾ ಕ್ಲಾಸ್ ವೇಷಧರಿಸಿ ಕಾಂತಾರ ಸಿನಿಮಾದಂತೆ ಪಂಜುರ್ಲಿ ದೈವದ ಅಣುಕಿಸುವ ವಿಡಿಯೋ ವೈರಲ್

ಉಡುಪಿ : ಸಾಂತಾ ಕ್ಲಾಸ್ ವೇಷ ಧರಿಸಿ ಕಾಂತಾರ ಸಿನೆಮಾದಲ್ಲಿನ ಪಂಜುರ್ಲಿ ದೈವವನ್ನು ಅಣಿಕಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.

ಕ್ರಿಸ್ಮಸ್ ಹಿನ್ನಲೆಯಲ್ಲಿ ಮನೆಮನೆಗೆ ಸಾಂತಾಕ್ಲಾಸ್ ವೇಷದಲ್ಲಿ ಭೇಟಿ ನೀಡುವ ಸಂದರ್ಭದ ಈ ವಿಡಿಯೋ ಮಾಡಲಾಗಿದ್ದು, ಸಾಂತಾಕ್ಲಾಸ್ ವೇಷಧಾರಿ ಕಾಂತಾರ ಚಲನಚಿತ್ರದಲ್ಲಿನ ದೃಶ್ಯದಂತೆಯೇ ದೈವದ ಅನುಕರಣೆ ಮಾಡಿದ್ದಾನೆ . ಸದ್ಯ ವಿಡಿಯೋ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಾಂತಾಕ್ಲಾಸ್ ವೇಷದಲ್ಲಿ ದೈವ ನಿಂದನೆ ಮಾಡಲಾಗಿದ್ದು, ಕರಾವಳಿಯ ದೈವಾರಾಧನೆ ಕುರಿತ ಯಾವುದೇ ಹಾಸ್ಯ ಸಹಿಸುದಿಲ್ಲಾ, ಇದು ಅಕ್ಷೇಪಾರ್ಹವಾಗಿದ್ದು, ದೈವವನ್ನು ಅಣುಕಿಸುವ ವಿಡಿಯೋ ಮಾಡುವವರ ವಿರುದ್ದ ಕ್ರಮಕ್ಕೆ ಆಗ್ರಹಸಲಾಗಿದೆ.

Check Also

ಸುರತ್ಕಲ್: ಮನೆ ಮೇಲೆ ‌ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುರತ್ಕಲ್: ಭಾರೀ ಗಾಳಿ ಮಳೆಗೆ ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಬಿದ್ದು, ಮನೆಯಲ್ಲಿದ್ದ ಬಾಲಕ ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ …

Leave a Reply

Your email address will not be published. Required fields are marked *

You cannot copy content of this page.