December 6, 2025
thmb-2025-02-28T154559.175

ಆಗ್ರಾ : ಇತ್ತೀಚೆಗೆ ದೇಶದಾದ್ಯಂತ ಸಂಚಲನ ಮೂಡಿಸಿದ್ದ ಐಟಿ ಉದ್ಯೋಗಿ ಅತುಲ್ ಆತ್ಮಹತ್ಯೆ ಪ್ರಕರಣದ ಬಳಿಕ ಇದೀಗ ಅದೇ ರೀತಿಯ ಮತ್ತೊಂದು ಆತ್ಮಹತ್ಯೆ ಪ್ರಕರಣ ನಡೆದಿದೆ, ಉತ್ತರ ಪ್ರದೇಶದ ಆಗ್ರಾದಲ್ಲಿ ಐಟಿ ಕಂಪನಿ ಮ್ಯಾನೇಜರ್ ಮಾನವ್ ಶರ್ಮಾ ಎಂಬುವವರು ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಹಾಕಿಕೊಳ್ಳುವ ಮೊದಲು ಮಾನವ್ ಶರ್ಮಾ ವಿಡಿಯೋ ಮಾಡಿದ್ದು, ಅದು ವೈರಲ್ ಆಗಿದೆ.

ಮಾನವ್ ಶರ್ಮಾ ಮೂಲತಃ ಆಗ್ರಾದ ಡಿಫೆನ್ಸ್ ಕಾಲೋನಿಯ ನಿವಾಸಿಯಾಗಿದ್ದು. ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಾನವ್ ಅವರ ತಂದೆ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದು ನಿವೃತ್ತರಾಗಿದ್ದಾರೆ.

ಮಾನವ್ ಶರ್ಮ ಅವರ ತಂದೆ ನರೇಂದ್ರ ಶರ್ಮಾ ಅವರ ಹೇಳಿಕೆಯಂತೆ ತನ್ನ ಮಗನಿಗೆ ಕಳೆದ ವರ್ಷ ಜನವರಿಯಲ್ಲಿ ಮದುವೆಯಾಗಿದ್ದು ಮಗ, ಸೊಸೆ ಇಬ್ಬರೂ ಮುಂಬೈಯಲ್ಲಿ ವಾಸವಾಗಿದ್ದರು. ಆದರೆ ಕೆಲವೇ ತಿಂಗಳ ಬಳಿಕ ಸೊಸೆ ಮಗನ ಜೊತೆ ಜಗಳ ಮಾಡಲು ಆರಂಭಿಸಿದ್ದಾಳೆ. ಅಲ್ಲದೆ ತಮ್ಮ ಕುಟುಂಬದ ಮೇಲೆ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡುವ ಬಗ್ಗೆಯೂ ಬೆದರಿಸುತಿದ್ದಳು ಎಂದು ಹೇಳಿದ್ದಾರೆ . ನನಗೆ ನನ್ನ ಹೆಂಡತಿಯಿಂದ ತುಂಬಾ ಬೇಸರವಾಗಿದೆ, ಸಾವನ್ನು ಬಿಟ್ಟು ಬೇರೆ ದಾರಿಯಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಾತನಾಡಿರುವ ಮಾನವ್​ ಪುರುಷರನ್ನು ರಕ್ಷಿಸಲು ಕಾನೂನುಗಳನ್ನು ರಚಿಸಬೇಕು. ಅಪ್ಪಾ, ಅಮ್ಮ ನನ್ನನ್ನು ಕ್ಷಮಿಸಿ, ಹೆತ್ತವರಿಗೆ ಯಾರೂ ಕೂಡ ತೊಂದರೆ ಕೊಡಬೇಡಿ, ನಾನು ನನ್ನ ಕರ್ತವ್ಯಕ್ಕೆ ರಜೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.