




ಒಡಿಶಾದ ಬಾಲಸೋರ್‌ನಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ದುರಂತಕ್ಕೆ ಕಾರಣವೇನು ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಸಿಗ್ನಲ್‌ನಲ್ಲಿ ಗೊಂದಲ ಉಂಟಾಗಿದ್ದೇ ದುರ್ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಯಶವಂತಪುರ-ಹೌರಾ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಅಪಘಾತಕ್ಕೀಡಾದವು.
ತಪ್ಪಾದ ಸಿಗ್ನಲ್ ಕಾರಣದಿಂದ ಕೋರಮಂಡಲ್ ಎಕ್ಸ್‌ಪ್ರೆಸ್ ಗೂಡ್ಸ್ ರೈಲು ನಿಂತಿದ್ದ ಮಾರ್ಗವನ್ನು ಪ್ರವೇಶಿಸಿತು. ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ನಂತರ ಕೆಲವು ಬೋಗಿಗಳು ಪಕ್ಕದ ಹಳಿ ಮೇಲೆ ಬಿದ್ದವು, ನಂತರ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಹೆಚ್ಚಿನ ತನಿಖೆ ನಂತರ ಮತ್ತಷ್ಟು ಮಾಹಿತಿ
ರೈಲ್ವೇ ಸುರಕ್ಷತೆಯ ಆಯುಕ್ತರಿಂದ ವಿವರವಾದ ತಾಂತ್ರಿಕ ವಿಚಾರಣೆಯ ನಂತರವೇ ಅಪಘಾತದ ನಿಖರವಾದ ಕಾರಣವನ್ನು ನಿರ್ಧರಿಸಲಾಗುತ್ತದೆ. ಅಪಘಾತದ ಕಾರಣವನ್ನು ತಿಳಿಯಲು ಕೇಂದ್ರ ರೈಲ್ವೆ ಸಚಿವಾಲಯ ಈಗಾಗಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.