ವಯನಾಡ್ ಭೂಕುಸಿತ ದುರಂತ : 143 ಕ್ಕೇರಿದ ಸಾವಿನ ಸಂಖ್ಯೆ , 130 ಮಂದಿಗೆ ಗಾಯ…!!

ವಯನಾಡ್ : ಕೇರಳದ ವಯನಾಡ್ ನಲ್ಲಿ ಭೀಕರ ಭೂಕುಸಿತಕ್ಕೆ ಸಿಲುಕಿ ನಲುಗಿ ಹೋಗಿರುವ ಕೇರಳದ ವಯನಾಡ್ ನಲ್ಲಿ ಸಾವನ್ನಪ್ಪಿದ ದುರ್ದೈವಿಗಳ ಸಂಖ್ಯೆ 143 ಕ್ಕೇರಿದೆ. ಒಟ್ಟು 45 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 3,069 ಜನರಿಗೆ ವಸತಿ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಭೂಕುಸಿತ ಸಂಭವಿಸಿದ ನಂತರ ಕನಿಷ್ಠ 143 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 130 ಜನರು ಗಾಯಗೊಂಡಿದ್ದಾರೆ ಎಂದು ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ, ಸುಮಾರು 100 ಜನರು ನಾಪತ್ತೆಯಾಗಿದ್ದು 400 ಕುಟುಂಬಗಳು ಅಪಾಯದಲ್ಲಿದ್ದಾರೆ. ಮಂಗಳವಾರ ನಾಲ್ಕು ಗಂಟೆಗಳ ಅವಧಿಯಲ್ಲಿ ವಯನಾಡ್‌ನಲ್ಲಿ ಮೂರು ಭೂಕುಸಿತಗಳು ಸಂಭವಿಸಿದ್ದವು.
ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ವಾಹನ ಮಲಪ್ಪುರಂ ಜಿಲ್ಲೆಯ ಮಂಜೇರಿ ಬಳಿ ಸಣ್ಣ ಅಪಘಾತವಾಗಿದೆ. ವಯನಾಡಿಗೆ ಪ್ರಯಾಣಿಸುತ್ತಿದ್ದ ಸಚಿವೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಪೋಲೀಸರು ತಿಳಿಸಿದ್ದಾರೆ.

Check Also

ಕಾರ್ಕಳ : ಶಾಲೆಯಲ್ಲಿ ಈದ್‌ ಮಿಲಾದ್‌ ಆಚಣೆ- ಪೋಷಕರಿಂದ ಆಕ್ರೋಶ

ಉಡುಪಿ ಕಾರ್ಕಳ ಸಚ್ಚರಿಪೇಟೆಯ ಖಾಸಗಿ ಶಾಲೆಯಲ್ಲಿ ಈದ್‌ ಮಿಲಾದ್‌ ಆಚರಣೆ ಮಾಡಿರುವುದಕ್ಕೆ ಹಿಂದೂ ಮಕ್ಕಳ ಪೋಷಕರಿಂದ ಆಕ್ಷೇಪ ವ್ಯಕ್ತವಾಗಿದೆ. ಸಚ್ಚರಿಷೇಟೆಯ …

Leave a Reply

Your email address will not be published. Required fields are marked *

You cannot copy content of this page.