ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಟಾಗೋರ್ ಕಡಲ ತೀರದಲ್ಲಿ ಏಂಡಿ ಬಲೆಗೆ ಬೃಹತ್ ಕುರಡೆ ಮೀನೊಂದು ಸಿಕ್ಕಿದೆ.
ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬಿಸಿಲ ವಾತಾವರಣವಿದೆ.
ಹೀಗಾಗಿ ಸಾಂಪ್ರದಾಯಕ ಏಂಡಿ ಮೀನುಗಾರಿಕೆ ಬಿರುಸು ಪಡೆದಿದೆ.
ಶನಿವಾರ ಉದಯ ಬಾನಾವಳಿ ಎನ್ನುವವರ ತಂಡ ಮೀನುಗಾರಿಕೆ ಮಾಡುವಾಗ ಈ ಅಪರೂಪದ ಮೀನು ಬಲೆ ಸೇರಿದೆ.
ಸಾಮಾನ್ಯವಾಗಿ ಏಂಡಿ ಬಲೆಗೆ ಸಣ್ಣ ಮೀನುಗಳು ಸೇರಿದಂತೆ ಏಡಿಗಳು ಸಿಗುತ್ತವೆ.
ಆದರೆ ಅಪರೂಪವಾಗಿ ಸಿಗುವ ಕುರಡೆ ಮೀನು ಕಂಡು ಮೀನುಗಾರರು ಹರ್ಷ ವ್ಯಕ್ತಡಿಸಿದರು.
ಬಲೆಗೆ ಸಿಕ್ಕ ಕುರಡೆ ಮೀನು 25 ಕೆ.ಜಿ ತೂಕವಿತ್ತು.
ರುಚಿಕರವಾಗಿರುವ ಮೀನು ಖರೀದಿಗೆ ಸಮುದ್ರ ತೀರದಲ್ಲೇ ಗ್ರಾಹಕರು ಮುಗಿಬಿದ್ದ ಪ್ರಸಂಗವೂ ನಡೆಯಿತು.
ಬಳಿಕ ಕೆ.ಜಿಗೆ 350 ರೂ.ಯಂತೆ ಮೀನು ಮಾರಾಟ ಮಾಡಲಾಯಿತು.