March 5, 2026
WhatsApp Image 2024-11-30 at 12.30.54 PM

ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಅಂಕೆ ಸಂಖ್ಯೆಗಳ ಮೇಲೆ ಹಣವನ್ನು ಪಣವನ್ನಾಗ್ಗಿಟ್ಟುಕೊಂಡು ಅಕ್ರಮವಾಗಿ ನಡೆಸುತ್ತಿದ್ದ ಮಟ್ಕಾ ಚೀಟಿ ದಂಧೆಗೆ ಪೊಲೀಸರು ದಾಳಿ ನಡೆಸಿ, ಆರೋಪಿಗಳ ಸಹಿತ ನಗದು ವಶ ಪಡಿಸಿಕೊಂಡ ಘಟನೆ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ತುಂಬೆ ಜಂಕ್ಷನ್ ಬಳಿ ನಡೆದಿದೆ.

ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ತುಂಬೆ ಜಂಕ್ಷನ್ ಬಳಿ ಹೋಟೇಲ್‌ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮಟ್ಕಾ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯ ಪಿ.ಎಸ್.ಐ ರಾಮಕೃಷ್ಣ ನೇತೃತ್ವದ ತಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ದಂಧೆಯಲ್ಲಿ ಭಾಗಿಯಾದ ಉಳ್ಳಾಲ ತಾಲೂಕಿನ ಬೋಳಿಯಾರು ನಿವಾಸಿ ಅಬೂಬಕ್ಕರ್ (38), ಬಂಟ್ವಾಳ ತಾಲೂಕು ಸಜಿಪ ಮೂಡಾದ ದಿನೇಶ್ ಕುಮಾರ್ (36) ಎಂಬ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ 2,850/- ನಗದು ಹಣವನ್ನು ಹಾಗೂ ಮಟ್ಕಾ ಚೀಟಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ ನಂ: 180/2024 ಕಲಂ:78 ಕೆ.ಪಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

About The Author

Leave a Reply

Your email address will not be published. Required fields are marked *

You cannot copy content of this page.