December 27, 2024
WhatsApp Image 2023-08-30 at 2.50.27 PM

ಮೈಸೂರು: ನಗರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆಗೂಡಿ, ಗೃಹ ಲಕ್ಷ್ಮಿ ಯೋಜನೆಗೆ ಡಿಜಿಟಲ್ ಬಟನ್ ಒತ್ತುವ ಮೂಲಕ ಚಾಲನೆ ನೀಡಲಾಗಿದೆ. ಹೀಗಾಗಿ ಇಂದಿನಿಂದಲೇ ರಾಜ್ಯದ ಯಜಮಾನಿ ಮಹಿಳೆಯರ ಖಾತೆಗೆ 2000 ರೂ ಹಣ ಜಮಾ ಆಗಲಿದೆ.

 

ಮೈಸೂರಿನ ಮಹರಾಜ ಗ್ರೌಂಡ್ ನಲ್ಲಿ ಇಂದು ಚಾರಿತ್ರಿಕವಾದ ಗೃಹಲಕ್ಷ್ಮಿ ಯೋಜನೆ ಉದ್ಘಾಟನಾ ಸಮಾವೇಶದ ಐತಿಹಾಸಿಕ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಸಾಗರೋಪಾದಿಯಲ್ಲಿ ನಾರಿಯರು ಭಾಗವಹಿಸಿದ್ದರು.

ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ದಕ್ಷಿಣ ಭಾರತದ ತಮಿಳುನಾಡು, ತೆಲಂಗಾಣ, ಆಂಧ್ರ ಮತ್ತು ಕೇರಳದಿಂದಲೂ ಸಾವಿರಾರು ನಾರಿಯರು, ಗೃಹಿಣಿಯರು “ಗೃಹಲಕ್ಷ್ಮಿ” ಉದ್ಘಾಟನೆಗೆ ಸಾಕ್ಷಿಯಾಗಿದ್ದಾರೆ.

ಶ್ರಮಿಕ ವರ್ಗದ, ದುಡಿಯುವ ವರ್ಗಗಳ ಮಹಿಳೆಯರು, ಮಹಿಳಾ ಕಾರ್ಮಿಕರು ಮಹಿಳಾ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸ್ವಯಂಸ್ಫೂರ್ತಿಯಿಂದ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವುದು ವಿಶೇಷವಾಗಿತ್ತು.

ಕಾಲೇಜು ವಿದ್ಯಾರ್ಥಿನಿಯರು ಕೂಡ ಅಪಾರ ಸಂಖ್ಯೆಯಲ್ಲಿ ಬಂದು ತಮ್ಮ ವಿದ್ಯಾಭ್ಯಾಸಕ್ಕೆ ಬಹಳ ದೊಡ್ಡ ನೆರವಾದ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಕೊಟ್ಟಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾರ್ಗದುದ್ದಕ್ಕೂ ಅಭಿನಂದನೆ, ಧನ್ಯವಾದ ಹೇಳುವ ಬ್ಯಾನರ್ ಗಳನ್ನು ಹಿಡಿದು ಸಮಾವೇಶಕ್ಕೆ ಆಗಮಿಸಿದ್ದರು.

ಬೆಳಗ್ಗೆ 10 ಗಂಟೆ ವೇಳೆಗೇ ಮಹಾರಾಜ ಗ್ರೌಂಡ್ ನಲ್ಲಿ ತುಂಬಿ ತುಳುಕುತ್ತಿದ್ದ ಮಹಿಳಾ ಜನಸ್ತೋಮ ಸೇರಿತ್ತು. ಪಿಂಕ್ ಬಣ್ಣದ ಧಿರಿಸಿನಲ್ಲಿ ಸಮಾವೇಶದ ಮೈದಾನದಲ್ಲಿ ಕಂಗೊಳಿಸಿದ ಸಾವಿರಾರು ಸಂಖ್ಯೆಯ ವಿದ್ಯಾರ್ಥಿನಿಯರು ಮತ್ತು ಗೃಹಿಣಿಯರು ಕಂಡು ಬಂದರು.

ಸರ್ಕಾರದ ಕಾರ್ಯಕ್ರಮ ಮತ್ತು ಯೋಜನೆಗಳ ಚರಿತ್ರೆಯಲ್ಲಿ ಏಕ ಕಾಲಕ್ಕೆ, ಪ್ರತೀ ತಿಂಗಳು ಒಂದೂವರೆ ಕೋಟಿಗೂ ಹೆಚ್ಚು ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸುವ ಸರ್ಕಾರಿ ಚಳವಳಿಯ ಚೈತನ್ಯ ಪಡೆದುಕೊಂಡ ಕಾರ್ಯಕ್ರಮ ಇದಾಗಿತ್ತು.

ಈ ವೇಳೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ 2000 ರೂ ಪಾವತಿಸುವಂತ ಡಿಜಿಟಲ್ ಬಟನ್ ಗೆ ಚಾಲನೆ ನೀಡಿದರು. ಈ ಮೂಲಕ ಇಂದಿನಿಂದ ರಾಜ್ಯದ ಯಜಮಾನಿ ಮಹಿಳೆಯರಿಗೆ 2000 ರೂ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಆರಂಭಗೊಳ್ಳಲಿದೆ.

About The Author

Leave a Reply

Your email address will not be published. Required fields are marked *

You cannot copy content of this page.