ಉತ್ತರಾಖಂಡ : ಸುರಂಗದಿಂದ ಸುರಕ್ಷಿತವಾಗಿ ಹೊರಬಂದ 41 ಕಾರ್ಮಿಕರು ; 17 ದಿನಗಳ ಕಾರ್ಯಾಚರಣೆ ಸುಖಾಂತ್ಯ

ಉತ್ತರಾಖಂಡ್ : ಕಳೆದ 17 ದಿನಗಳಿಂದ ಚಾರ್‌ ಧಾಮ್‌ ಸರ್ವ ಋತು ಹೆದ್ದಾರಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿದ್ದ 41 ಕಾರ್ಮಿಕರು ಇಂದು ಸುರಕ್ಷಿತವಾಗಿ ಹೊರ ಬಂದಿದ್ದಾರೆ.ಚಾರ್‌ಧಾಮ್‌ ಸರ್ವ ಋತು ಹೆದ್ದಾರಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿದ್ದ 41 ಕಾರ್ಮಿಕರು 17 ದಿನಗಳ ನಂತರ ಸುರಕ್ಷಿತವಾಗಿ ಹೊರಬಂದಿದ್ದಾರೆ. ಆ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ದುರಂತವೊಂದು ಸುಖಾಂತ್ಯ ಕಂಡಿದೆ.

ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ತೆಗೆಯಲು ಎಲ್ಲಾ ರೀತಿ ಅಂತರಾಷ್ಟ್ರೀಯ ಮಟ್ಟದ ಮೆಷಿನ್ ಗಳನ್ನು ಬಳಸಿದ್ದರು, ಕಾರ್ಮಿಕರನ್ನು ರಕ್ಷಣೆ ಮಾಡಲು ಸಾಧ್ಯವಾಗಿರಲ್ಲಿಲ್ಲ, ಕೊನೆಗೆ ಸುರಂಗಕ್ಕೆ ಅಳವಡಿಸಿದ ಕೊಳವೆ ಮೂಲಕ ಹೊರಕ್ಕೆ ಬರುತ್ತಿರುವ ಕಾರ್ಮಿಕ ನಿಷೇಧಿ ಇಲಿ ಬಿಲ ಮೈನಿಂಗ್ ತಂತ್ರಜ್ಞಾನ ಬಳಸಿ ಕೊರೆದ ರಂಧ್ರಕ್ಕೆ ಎರಡು ಅಡಿ ವ್ಯಾಸದ ಕೊಳವೆ ಅಳವಡಿಸಲಾಗಿದೆ. ಅದರೊಳಗೆ ಸ್ಟ್ರೆಚರ್‌ ಬಳಸಿ ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಹೊರಕ್ಕೆ ಕರೆತರಲಾಯಿತು

ಸುರಕ್ಷಿತವಾಗಿ ಹೊರ ಬಂದ ಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಅವರನ್ನು ಕರೆದೊಯ್ಯಲು ಆಂಬುಲೆನ್ಸ್‌ಗಳು ಕಾದು ನಿಂತಿದ್ದವು. ಸುರಂಗದೊಳಗೆ ಹೋದ ಆಂಬುಲೆನ್ಸ್‌ಗಳು ಕೊಳವೆಯಿಂದ ಹೊರಬರುತ್ತಿದ್ದ ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಹೊತ್ತೊಯ್ದವು.

ಕಾರ್ಮಿಕರ ಚಿಕಿತ್ಸೆಗಾಗಿ ಉತ್ತರಕಾಶಿ ಜಿಲ್ಲೆಯಲ್ಲೇ ಪ್ರತ್ಯೇಕ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ಏಮ್ಸ್‌ನ ತಜ್ಞ ವೈದ್ಯರ ತಂಡವೇ ಇಲ್ಲಿ ಬೀಡು ಬಿಟ್ಟಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ತಕ್ಷಣ ಕಾರ್ಮಿಕರನ್ನು ಸಾಗಿಸಲು ಸೇನೆಯ ಹೆಲಿಕಾಪ್ಟರ್ ಸ್ಥಳದಲ್ಲೇ ಬೀಡು ಬಿಟ್ಟಿತ್ತು.

 

Check Also

ಬಂಟ್ವಾಳ: ಮಧ್ಯರಾತ್ರಿ ರಿಕ್ಷಾ ನಿಲ್ಲಿಸಿ ನಾಪತ್ತೆ! ದರ್ಶನ ಪಾತ್ರಿ ನದಿಗೆ ಹಾರಿರುವ ಶಂಕೆ|

ಬಂಟ್ವಾಳ : ಕುಕ್ಕಿಪಾಡಿ ಗ್ರಾಮದ ನಿವಾಸಿ ದರ್ಶನ ಪಾತ್ರಿ ಗಿರೀಶ್ ಎಂಬವರು ಕಾಣೆಯಾಗಿದ್ದಾರೆ ಎಂಬ ದೂರು ಪೂಂಜಲ್‌ಕಟ್ಟೆ ಠಾಣೆಯಲ್ಲಿ ಪ್ರಕರಣ …

Leave a Reply

Your email address will not be published. Required fields are marked *

You cannot copy content of this page.