ಬೆಂಗಳೂರು: ದ್ವಿತೀಯ ಪಿಯುಸಿ 2023ರ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಮಾರ್ಚ್ 9ರ ಗುರುವಾರ ಆರಂಭವಾಗುವ ಪರೀಕ್ಷೆಯು ಮಾರ್ಚ್ 29ರ ತನಕ ನಡೆಯಲಿದೆ. ಮಧ್ಯದಲ್ಲಿ ಒಟ್ಟು 7 ದಿನಗಳಲ್ಲಿ ಪರೀಕ್ಷೆಗಳು ಇರುವುದಿಲ್ಲ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 36 ವಿವಿಧ ವಿಷಯಗಳು, ಭಾಷೆಗೆ ಸಂಬಂಧಿಸಿದಂತೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಮಂಡಳಿಯು ಮಾಹಿತಿ ನೀಡಿದೆ. ಪರೀಕ್ಷೆಯ ವೇಳಾಪಟ್ಟಿ:

ಮಾರ್ಚ್ 9: ಕನ್ನಡ, ಅರೇಬಿಕ್ 11: ಗಣಿತ, ಶಿಕ್ಷಣಶಾಸ್ತ್ರ 13: ಅರ್ಥಶಾಸ್ತ್ರ 14: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ವಿಜ್ಞಾನ, ಮೂಲಗಣಿತ 15: ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ 16: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ 17: ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೊಮೊಬೈಲ್, ಆರೋಗ್ಯರಕ್ಷಣೆ, ಸೌಂದರ್ಯ ಮತ್ತು ಕ್ಷೇಮಶಾಸ್ತ್ರ 18: ಭೂಗೋಳ ವಿಜ್ಞಾನ, ಜೀವ ವಿಜ್ಞಾನ 20: ಇತಿಹಾಸ, ಭೌತವಿಜ್ಞಾನ 21: ಹಿಂದಿ 23: ಇಂಗ್ಲಿಷ್ 25: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ 27: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ವಿಜ್ಞಾನ, ಗೃಹ ವಿಜ್ಞಾನ 29: ಸಮಾಜ ವಿಜ್ಞಾನ, ವಿದ್ಯುನ್ಮಾನ, ಗಣಕ ವಿಜ್ಞಾನ

Check Also

ವಂದೇ ಭಾರತ್‌ ಟಿಕೆಟ್‌ ದರ ಇಳಿಕೆ: ಸೋಮಣ್ಣ

ಬೆಂಗಳೂರು: ವಂದೇ ಭಾರತ್‌ ರೈಲು ಸಹಿತ ಎಲ್ಲ ರೈಲುಗಳ ದರ ಪಟ್ಟಿ ಪರಿಷ್ಕರಣೆ ಮಾಡುವ ಚಿಂತನೆ ಇದೆ ಎಂದು ರೈಲ್ವೇ …

Leave a Reply

Your email address will not be published. Required fields are marked *

You cannot copy content of this page.