March 14, 2026
WhatsApp Image 2023-06-29 at 2.43.42 PM

ಮಂಗಳೂರು: ದಿನಾಂಕ 26-06-2023 ರಂದು 24 ವರ್ಷ ಪ್ರಾಯದ ಸಂತ್ರಸ್ಥೆ ಮಹಿಳೆಯು ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಬಂದು ನೀಡಿದ ಲಿಖಿತ ಪಿರ್ಯಾದಿಯಲ್ಲಿ ತನಗೆ ಕಡಬ ಮೂಲದ ಅನೀಶ್ ರೆಹಮಾನ್ ಎಂಬಾತನು ಇನ್ ಸ್ಟಾಗ್ರಾಂ ಮುಖಾಂತರ ಪರಿಚಯವಾಗಿ ಬಳಿಕ ಪರಸ್ಪರ ಪ್ರೀತಿಸುತ್ತಿದ್ದು, ಆರೋಪಿತನು ಸಂತ್ರಸ್ತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಮಂಗಳೂರಿನ ಪೂಂಜಾ ಇಂಟರ್ ನ್ಯಾಷನಲ್ ಹೊಟೇಲ್ ಗೆ ಕರೆದುಕೊಂಡು ಹೋಗಿ ರೂಮ್ ಪಡೆದುಕೊಂಡು ದಿನಾಂಕ 28-05-2023 ರಿಂದ ಸುಮಾರು 20 ದಿನಗಳ ಕಾಲ ನಿರಂತರವಾಗಿ ದೈಹಿಕ ಸಂಪರ್ಕ ನಡೆಸಿದ್ದು, ನಂತರ ಪಿರ್ಯಾದಿದಾರರಾದ ಸಂತ್ರಸ್ಥೆ ಮಹಿಳೆಗೆ ಆರೋಪಿತನು ಈ ಹಿಂದೆ ಮದುವೆಯಾಗಿರುವ ವಿಚಾರ ತಿಳಿದು ತನಗೆ ಆಗಿರುವ ತೊಂದರೆಯ ಬಗ್ಗೆ ಮನೆಯಲ್ಲಿ ಹೇಳಿಕೊಂಡು ಆ ಬಳಿಕ ಠಾಣೆಗೆ ದೂರು ನೀಡಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ. 52/2023 ಕಲಂ 417, 376, 506 ಐಪಿಸಿ ಯಂತೆ ಕೇಸು ದಾಖಲಾಗಿರುತ್ತದೆ. ಅದೇ ದಿನ ಸದ್ರಿ ಆರೋಪಿತನಾದ ಅನೀಶ್ ರೆಹಮಾನ್ ನನ್ನು ಮಂಗಳೂರು ನಗರದಲ್ಲಿ ದಸ್ತಗಿರಿ ಮಾಡಿ ದಿನಾಂಕ 27-06-2023 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಈತನ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 40/2023 ಕಲಂ 27 ಬಿ ಎನ್.ಡಿ.ಪಿ.ಎಸ್. ಆ್ಯಕ್ಟ್ ನಂತೆ ಕೂಡಾ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದ ತನಿಖೆಯನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಶ್ರೀ ಲೋಕೇಶ್ ಎ.ಸಿ. ರವರು ನಡೆಸುತ್ತಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.