ಬಾಗಲಕೋಟೆ : ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ (by accident) ಚಿಕ್ಕ ಮಕ್ಕಳು ನಾಣ್ಯ ನುಂಗಿದ್ದು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಭೂಪ ಬರೋಬ್ಬರಿ 187 ನಾಣ್ಯಗಳನ್ನು ನುಂಗಿ ಅಚ್ಚರಿ ಎಂಬಂತೆ ಸಾವಿನ ದವಡೆಯಿಂದ ಪಾರಾದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಸಂತೆ ಕೆಲ್ಲೂರ ಗ್ರಾಮದ ದ್ಯಾಮಪ್ಪ ಹರಿಜನ (54) ಎಂಬುವವರು 5 ರೂಪಾಯಿ ಮುಖಬೆಲೆಯ 56 ನಾಣ್ಯ, 2 ರೂಪಾಯಿ ಮೌಲ್ಯದ 51 ನಾಣ್ಯ ಮತ್ತು 1 ರೂಪಾಯಿ ಮುಖಬೆಲೆಯ 80 ನಾಣ್ಯ ಸೇರಿ ಒಟ್ಟು 187 ನಾಣ್ಯಗಳನ್ನು ನುಂಗಿದ್ದರು.
ಆ ನಾಣ್ಯಗಳ ತೂಕ ಒಂದೂವರೆ ಕಿಲೋ ಇತ್ತು. ಜೀವಕ್ಕೂ ಅಪಾರ ತಂದೂಡ್ಡಿತ್ತು. ಇಷ್ಟು ಕಾಯಿನ್ಗಳನ್ನು ದ್ಯಾಮಪ್ಪ ಯಾವ ಕಾರಣಕ್ಕೆ ನುಂಗಿದರು ಎಂಬುದು ನಿಗೂಢವಾಗಿದೆ. ಆತ್ಮಹತ್ಯೆಗೆ ಯತ್ನಿಸಿ ಹೀಗೆ ಮಾಡಿರಬೇಕು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆ ವೈದ್ಯರು ವ್ಯಕ್ತಿಯ ಹೊಟ್ಟೆಯಿಂದ ನಾಣ್ಯಗಳನ್ನು (coin’s) ಹೊರ ತೆಗೆದು ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.