

ಬೆಂಗಳೂರು : ವಿಧಾನಸಭಾ ಚುನಾವಣೆ ಮುಗಿದು ಕಾಂಗ್ರೆಸ್ ಆಡಳಿತಕ್ಕೆ ಬಂದು ಐದು ತಿಂಗಳು ಮುಗಿಯುತ್ತಾ ಬಂದರೂ ಬಿಜೆಪಿಯಲ್ಲಿ ಇದುವರೆಗೂ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಪಕ್ಷ ನಾಯಕನ ಆಯ್ಕೆ ನಡೆದಿಲ್ಲ. ಈ ಸ್ಥಾನಗಳಿಗೆ ಈಗಾಗಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೆಸರು ಮುಂಚೂಣಿಯಲ್ಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಈ ವಿಷಯದ ಕುರಿತಾಗಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಮಾತನಾಡಿದ್ದು,ಯಡಿಯೂರಪ್ಪರಂತಹ ನಾಯಕ ಬಿಜೆಪಿಯಲ್ಲಿ ಯಾರು ಇಲ್ಲ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು. ವಿಜಯೇಂದ್ರ ಪರ ಮಾತಾಡಿದ್ರೆ ಬಿಎಸ್ ವೈ ಮಾತಾಡಿಸಿದ್ದರು ಅಂತಾರೆ. ಬಿಎಸ್ ವೈ ಕೀಳುಮಟ್ಟದ ರಾಜಕಾರಣಿ ಅಲ್ಲ.
ಆದರೆ ಬಿ. ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗುವುದರಲ್ಲಿ ತಪ್ಪೇನಿದೆ? ಶಾಸಕ ಬಿ ವೈ ವಿಜಯೇಂದ್ರಗೆ ಪಕ್ಷದ ನಾಯಕತ್ವ ಕೊಟ್ಟರೆ.ಬಿ ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕೆಂದು ಕೇಳುತ್ತಿದ್ದಾರೆ.ನಾನು ಎಲ್ಲಾ ಕಡೆ ಪ್ರವಾಸ ಮಾಡಿದಾಗ ಕಾರ್ಯಕರ್ತರು ಕೂಡ ಈ ಕುರಿತು ಹೇಳಿದ್ದಾರೆ ಎಂದರು.
ಬಿಎಸ್ ಯಡಿಯೂರಪ್ಪ ಯಾವತ್ತಿಗೂ ಅವಕಾಶವಾದಿ ರಾಜಕಾರಣಿ ಅಲ್ಲ. ಬಿಎಸ್‌ವೈ ನಾಯಕತ್ವ ಇಲ್ಲದಿದ್ದಕ್ಕೆ ಹಲವರು ಹೊರಗೆ ಹೋಗುತ್ತಾರೆ. ಬಿ ಎಸ್ ವೈ ನಮಗೆ ಕಾಂಗ್ರೆಸ್ ಜೆಡಿಎಸ್ ಶಾಸಕರು ಬಂದಿದ್ದರು. ಪಕ್ಷದಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲ. ಬಿಜೆಪಿಯನ್ನು ಮತದಾರರು ಸೋಲಿಸಿಲ್ಲ ಸೋಲಿಸಿದ್ದು ನಮ್ಮವರೇ ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಬೆಂಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.