March 14, 2026
414aad94-1bf8-4ffd-9115-89b84a4c06c0

ಬೆಂಗಳೂರು : ಉಡುಪಿ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಶಕುಂತಲಾ ನಟರಾಜ್ ಅವರಿಗೆ ಠಾಣಾ ಜಾಮೀನು ನೀಡಲಾಗಿದೆ.

ಶಕುಂತಲಾ ಅವರು ಟ್ವೀಟರ್ ಅಲ್ಲಿ ಸಿಎಂ ಸಿದ್ದರಾಮಯ್ಯನವರ ಸೊಸೆ ಹಾಗೂ ಹೆಂಡತಿಯವರ ಕುರಿತು ಇದೇ ರೀತಿ ವಿಡಿಯೋ ಮಾಡಿದರೆ ಇದು ಮಕ್ಕಳ ಆಟ ಅಂತ ಒಪ್ಪಿಕೊಳ್ಳುತ್ತಾರ? ಎಂದು ವಿವಾದಾತ್ಮಕ ಪೋಸ್ಟ್ ಹಾಕಿದ್ದರು. ಈ ಕುರಿದಂತೆ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶಕುಂತಲಾ ಅವರನ್ನು ವಶಪಡಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.ನಂತರ ಶಶಿಕಲಾ ಅವರು ಪೋಲೀಸರ ಬಳಿ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಶಕುಂತಲಾ ಅವರನ್ನು ಸಿಎಂ ಕುಟುಂಬದ ಮಹಿಳೆಯರ ಬಗ್ಗೆ ವಯಕ್ತಿಕ ನಿಂದನೆಯಲ್ಲಿ ಬಂಧಿಸಿದರು. ಸಿಎಂ ಕುಟುಂಬದ ಕುರಿತು ವೈಯಕ್ತಿಕವಾಗಿ ಪೋಸ್ಟ್ ಮಾಡಿದ್ದೂ ತಪ್ಪು, ಇನ್ನು ಮುಂದೆ ಹೀಗೆ ಮಾಡದಿರಿ ಎಂದು ಎಚ್ಚರಿಸಿ ಕಳುಹಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.