
ಮಣಿಪಾಲ: ಮನೆಯ ಟೆರೇಸ್ ಮೇಲೆ ಆಟ ಆಡುತ್ತಿದ್ದಾಗ 8 ವರ್ಷದ ಬಾಲಕನೋರ್ವ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಣಿಪಾಲದ ದಶರಥನಗರದಲ್ಲಿ ಸಂಭವಿಸಿದೆ. ಆಯುಶ್ (8) ಮೃತಪಟ್ಟ ಬಾಲಕನಾಗಿದ್ದು ,ಈತ ಧಾರವಾಡ ಮೂಲದ ನಾಮದೇವ ಜಾಧವ್ ಎಂಬವರ ಮಗನಾಗಿದ್ದಾನೆ. ಜಾಧವ್ ಅವರು ಕೆಲ ದಿನಗಳ ಹಿಂದೆ ಮಣಿಪಾಲದ 80 ಬಡಗುಬೆಟ್ಟು ಗ್ರಾಮದ ದಶರಥ ನಗರದಲ್ಲಿರುವ ಸಂಬಂದಿಕರ ಮನೆಯಲ್ಲಿ ಕುಟುಂಬ ಸಮೇತ ಉಳಿದುಕೊಂಡಿದ್ದರು. ಜೂನ್ 25 ರಂದು ಮಧ್ಯಾಹ್ನದ ವೇಳೆ ಆಯುಶ್ ಇತರ ಮಕ್ಕಳೊಂದಿಗೆ ಮನೆಯ ಟೆರಸ್ ಮೇಲೆ ಆಟವಾಡುತ್ತಿದ್ದಾಗ ಆಯತಪ್ಪಿ ಆಕಸ್ಮಿಕವಾಗಿ ಟೆರೇಸ್ ನಿಂದ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಅವನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದು, ಜೂ.26 ರಂದು ಮಧ್ಯಾಹ್ನದ ವೇಳೆ ಆಯುಶ್ ಚಿಕಿತ್ಸೆ ಫಲಕಾರಿಯಾಗಿದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
