ಹಾಸನ : ಹೊಸ ಮಿಕ್ಸಿಯನ್ನು ಪರಿಶೀಲನೆ ಮಾಡುವಾಗ ಬ್ಲಾಸ್ಟ್ ಆದ ಘಟನೆ ಹಾಸನದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದ್ದು, ಕೊರಿಯರ್ ಅಂಗಡಿಯ ವ್ಯಕ್ತಿಯ ಕೈಗೆ ಗಂಭೀರ ಗಾಯಗಳಾಗಿದೆ.
ಹಾಸನದ ಕುವೆಂಪುನಗರದ 16ನೇ ಕ್ರಾಸ್‍ನಲ್ಲಿರುವ ಡಿಟಿಡಿಸಿ ಕೊರಿಯರ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ.ಕೊರಿಯರ್ ಮೂಲಕ ಮಿಕ್ಸಿ ಪಾರ್ಸೆಲ್ ಬಂದಿತ್ತು, ಆದರೆ ಅದನ್ನು ತೆಗೆದುಕೊಂಡ ಹೋದ ವ್ಯಕ್ತಿ ಮಿಕ್ಸಿ, ಜಾರ್ ನಮಗೆ ಬೇಡ ಎಂದು ಅಂಗಡಿ ಮಾಲೀಕನಿಗೆ ವಾಪಸ್ ನೀಡಿದ್ದ. ಅಂಗಡಿ ಮಾಲೀಕ ಶಶಿ ಮಿಕ್ಸಿಯನ್ನು ಪರಿಶೀಲನೆ ಮಾಡುವಾಗ ಸ್ಫೋಟಗೊಂಡಿದೆ.
ಸ್ಫೋಟದ ರಭಸಕ್ಕೆ ಕೊರಿಯರ್ ಅಂಗಡಿ ಮಾಲೀಕ ಶಶಿ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಸ್ಫೋಟದಿಂದಾಗಿ ಅಂಗಡಿಯ ಗ್ಲಾಸ್, ಗೋಡೆಗೂ ಹಾನಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.