March 5, 2026
WhatsApp Image 2023-02-27 at 2.41.53 PM

ಬೆಂಗಳೂರು : ನಗರದ ಚಾಲುಕ್ಯ ಸರ್ಕಲ್‌ ನಲ್ಲಿರುವ ಹೈ ಪಾಯಿಂಟ್ ಅಪಾರ್ಟ್ ನಲ್ಲಿ ಯುವತಿಯೊಬ್ಬಳು ಬಿಲ್ಡಿಂಗ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕೃತಿ(18) ಮೃತ ಯುವತಿಯಾಗಿದ್ದು ಅಪಾರ್ಟ್ಮೆಂಟ್ ನ 10ನೇ ಮಹಡಿಯಿಂದ ಕೆಳಗೆ ಹಾರಿ ಪ್ರಾಣ ಕಳಕೊಂಡಿದ್ದಾರೆ. ಮೃತ ಪ್ರಕೃತಿ ಸೋಫಿಯಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಟಾಪರ್ ಆಗಿದ್ದಳು. ಕೆಲ‌ ದಿನಗಳಿಂದ ಖಿನ್ನತೆಗೊಳಗಾಗಿದ್ದ ಪ್ರಕೃತಿ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂಬ ಮಾಹಿತಿ ಇದೆ. ಇದೇ ಕಾರಣಕ್ಕೆ ಪೋಷಕರು ವೈದ್ಯರ ಬಳಿ ಅನೇಕ ದಿನಗಳ ಕಾಲ ಪ್ರಕೃತಿಗೆ ಕೌನ್ಸಿಲಿಂಗ್ ಸಹ ಕೊಡಿಸಿದ್ದರಂತೆ. ಇಷ್ಟಾದ್ರು ಕಾಲೇಜಿನ ಪಕ್ಕದಲ್ಲಿರುವ ಅಪಾರ್ಟ್ಮೆಂಟ್ ಗೆ ಬಂದಿದ್ದ ಈಕೆ ನೇರವಾಗಿ ಮೇಲೆ ಮಹಡಿಗೆ ಹೋಗಲು ಯತ್ನಿಸಿದ್ದಾಳೆ. ಈ ವೇಳೆ ಹತ್ತನೇ‌ ಮಹಡಿಯಿಂದ  ಟೆರಸ್ ಹೋಗುವ ಗೇಟ್ ಲಾಕ್ ‌ಆಗಿತ್ತು. ಆದರೆ ಆತ್ಮಹತ್ಯೆಗೆ ನಿರ್ಧರಿಸಿ ಬಂದಿದ್ದ ಪ್ರಕೃತಿ ಹತ್ತನೇ ಮಹಡಿಯಿಂದ ಜಿಗಿದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸದ್ಯ ಘಟನೆ ಹಿನ್ನೆಲೆ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.