March 19, 2026
WhatsApp Image 2024-12-23 at 10.40.14 AM
ಕಾಸರಗೋಡು: ನಗರದ ಸಮೀಪ ಡಿವೈಎಫ್‌ಐ ಬ್ಲಾಕ್ ಕಾರ್ಯದರ್ಶಿ ಮತ್ತು ಸಿಪಿಎಂ ಮುಖಂಡ ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಸಂಭವಿಸಿದೆ.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿಗೆ ದೂರು ಬಂದ ಹಿನ್ನಲೆ ಡಿವೈಎಫ್‌ಐ ಮುಖಂಡನನ್ನು ಪಕ್ಷದಿಂದ ಕಿಕ್ ಔಟ್ ಮಾಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ. ಡಿವೈಎಫ್‌ಐ ತ್ರಿಕರಿಪುರ ಬ್ಲಾಕ್ ಕಾರ್ಯದರ್ಶಿ ಮತ್ತು ಪ್ರದೇಶ ಸಮಿತಿ ಸದಸ್ಯ ಸುಜಿತ್ ಕೊಡಕ್ಕಾಡ್ ಎಂಬಾತನ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬರುತ್ತಿದ್ದಂತೆ ಸುಜಿತ್ ಅವರನ್ನು ಡಿವೈಎಫ್‌ಐ ಬ್ಲಾಕ್ ಕಾರ್ಯದರ್ಶಿ ಮತ್ತು ಸಿಪಿಎಂ ಪ್ರದೇಶ ಸಮಿತಿಯ ಸ್ಥಾನದಿಂದ ತೆಗೆದುಹಾಕಲಾಗಿದೆ.
ಸುಜಿತ್ ಕೊಡಕಾಡನ್ ವಿರುದ್ಧ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ದೂರು ಸ್ವೀಕರಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಪಕ್ಷವು ವಿಚಾರಣೆ ನಡೆಸಿ ತುರ್ತು ಪ್ರದೇಶ ಸಮಿತಿ ಸಭೆಯನ್ನು ಕರೆದಿದೆ. ಆ ಬಳಿಕ ಸುಜಿತ್ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಸುಜಿತ್ ಕೊಡಕ್ಕಾಡ್ ಅವರು ಶಿಕ್ಷಕ, ಬರಹಗಾರ ಮತ್ತು ವ್ಲಾಗರ್ ಆಗಿ ಪ್ರಸಿದ್ಧರಾಗಿದ್ದಾರೆ. ಕಳೆದ ದಿನ ಮಹಿಳೆ ಸುಜಿತ್ ವಿರುದ್ಧ ಕಿರುಕುಳದ ದೂರು ನೀಡಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳದ ಬಗ್ಗೆ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ ಎಂಬುವುದು ಪ್ರಶ್ನಾರ್ಹವಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.