March 20, 2026
WhatsApp Image 2024-01-27 at 3.12.24 PM

ಮಂಗಳೂರು: ಕೊರಗಜ್ಜ ದೈವಾರಾಧಕರಾಗಿದ್ದ ಅಶೋಕ್ ಬಂಗೇರ ಅವರು ಹೃದಯಾಘಾತದಿಂದ ವಿಧಿವಶರಾದರು.

ಹಲವು ವರ್ಷಗಳಿಂದ ಅವರು ತಮ್ಮನ್ನು ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದ್ದ ಅಶೋಕ್ ಬಂಗೇರ ಅವರು  ನಿನ್ನೆ ರಾತ್ರಿ ರಕ್ತೇಶ್ವರಿ ನೇಮ ಆದ ಬಳಿಕ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಮಂಗಳೂರಿನ ಪದವಿನಂಗಡಿ ಬಳಿ ಇರುವ ಕೊರಗಜ್ಜನ ಸಾನಿಧ್ಯದಲ್ಲಿ ಅವರು ಕೊರಗಜ್ಜನ ಸೇವೆ ಮಾಡಿಕೊಂಡು ಬರುತ್ತಿದ್ದರು. ಅವರು ದೈವಾರಾಧನೆಯಲ್ಲಿ ಅದ್ಭುತ ಸೇವೆಯನ್ನು ಮಾಡುತ್ತಾ, ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಇದ್ದು ಅನೇಕ ಯುವ ಸಮೂಹಕ್ಕೆ ಮಾದರಿಯಾಗಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.